ರಸ್ತೆ ಬದಿಗಳಲ್ಲಿ ಗಿಡ ನೆಡುವುದಕ್ಕೆ ಚಾಲನೆ
ಉಪ್ಪಳ: ಪರಿಸರ ಸಂರಕ್ಷಣೆಯ ಅಂಗವಾಗಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಸಹಯೋಗದೊಂದಿಗೆ ಸೇವಾಭಾರತಿ ಕಲಾವೃಂದ, ಭಜನಾ ಮಂದಿರ ಬೇಕೂರು ಮತ್ತು ಮಾತೃ ವಿಭಾಗ ಹಾಗೂ ಮಕ್ಕಳು ಸೇರಿಕೊಂಡು ರಸ್ತೆ ಬದಿಗಳಲ್ಲಿ 108 ಸಸಿಗಳನ್ನು ನೆಡುವುದಕ್ಕೆ ಬೇಕೂರು ರಸ್ತೆ ಬದಿಯಲ್ಲಿ ನಿನ್ನೆ ಬೆಳಿಗ್ಗೆ ಚಾಲನೆ ನೀಡಲಾಯಿತು. ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ.ಬಿ ಶೆಟ್ಟಿ ಉದ್ಘಾಟಿಸಿದರು. ಕಲಾವೃಂದದ ಗೌರವಾಧ್ಯಕ್ಷ ಕುಂಞÂರಾಮ ಕಾನ, ಹಿರಿಯರಾದ ಅಪುö್ಪ ಬೆಳ್ಚಾಡ, ನಾರಾಯಣ ಕಾನ, ರಾಮಣ್ಣ ಆಚಾರ್ಯ, ಉಮೇಶ್ ಬೊಳ್ಳಾರು, ಅಶ್ರಫ್ ಬೇಕೂರು, ನ್ಯಾಯವಾದಿ ಗಂಗಾಧರ ಕೊಂಡೆವೂರು, ರಾಜ್‌ಗೋಪಾಲ್ ಭಟ್ ಕೊಂಡೆವೂರು ಉಪಸ್ಥಿತರಿದ್ದರು.