ರಸ್ತೆ ಬದಿ ಅಗಲ, ಚರಂಡಿ ನಿರ್ಮಿಸದೆ ಅಭಿವೃದ್ಧಿ ಬಾಯಾರುಪದವು- ಪೆರ್ಮುದೆ ರಸ್ತೆ ದುಸ್ಥಿತಿ
ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯÁರು ಪದವು ಪೆರ್ಮುದೆ ರಸ್ತೆಗೆ ನಬಾರ್ಡ್ ಮೂಲಕ ರೂ. 33,949,172 ಬಿಡು ಗಡೆಗೊಂಡಿತ್ತು. ಈಗ ಸಜಂಕಿಲ ದಿಂದ ಬಾಯರುಪದವು ತನಕ 3 ಕಿ.ಮೀ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭಗೊAಡಿದೆ. ರಸ್ತೆಯ ಬದಿ ವಿಸ್ತರಿಸದೆ ಚರಂಡಿ ನಿರ್ಮಿಸದೆ ಹಳೆ ಚರಂಡಿ ಮೇಲೆ ಜಲ್ಲಿ ಕಲ್ಲು ಹಾಕಲಾ ಗಿದೆ. ಚರಂಡಿ ನಿರ್ಮಿಸದಿದ್ದರೆ ಮಳೆ ಗಾಲದಲ್ಲಿ ನೀರು ರಸ್ತೆಯಲ್ಲೇ ಹರಿಯ ಬಹುದು. 5.5 ಮೀಟರ್ ಅಗಲದಲ್ಲಿ ಮೆಕ್ಕಡಾಮ್ ಡಾಮರೀಕರಣೆಗೊಳ್ಳುವ ಈ ರಸ್ತೆಯು ಅಲ್ಲಲ್ಲಿ ತಿರುವು ಮತ್ತು ಇಕ್ಕೆಡೆಗಳಲ್ಲಿ ಬೃಹತ್ ಹೊಂಡಗಳಿAದ ಕೂಡಿದೆ. ಇದನ್ನೆಲ್ಲ ಸರಿಪಡಿಸಿ ರಸ್ತೆ ಅಭಿವೃಧ್ಧಿಪಡಿಸಬೇಕೆಂದÀÄ ಸಾರ್ವಜನಿಕರು ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.