ರಸ್ತೆ ಬದಿ ನಿಂತಿದ್ದ ಯುವಕನ ಕೈಯಲ್ಲಿ ಎಂಡಿಎಂಎ ಪತ್ತೆ

ಉಪ್ಪಳ: ಎಂಡಿಎಂಎ ಸಹಿತ ರಸ್ತೆ ಬದಿ ನಿಂತಿದ್ದ ಯುವಕನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಉಪ್ಪಳ ಕೋಡಿಬೈಲು ಜೀನತ್ ಕೋಟೇಜ್‌ನ ಮೊಹಮ್ಮದ್ ರಹೀಸ್ (28) ಎಂಬಾತನನ್ನು ಮಂಜೇಶ್ವರ ಎಸ್.ಐ ರತೀಶ್ ನೇತೃತ್ವದಲ್ಲಿ ನಿನ್ನೆ ಸಂಜೆ ಸೆರೆ ಹಿಡಿಯಲಾಗಿದೆ. ಮೊಹಮ್ಮದ್ ರಹೀಸ್‌ನ ಕೈಯಿಂದ 2.53 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ.

ನಿನ್ನೆ ಸಂಜೆ ಉಪ್ಪಳ ಮಜಲ್‌ನಲ್ಲಿ ಎಸ್‌ಐ ನೇತೃತ್ವದಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಮೊಹಮ್ಮದ್ ರಹೀಸ್ ರಸ್ತೆ ಬದಿ ನಿಂತಿದ್ದು ಆತನ ಮೇಲೆ ಸಂಶಯಗೊಂಡು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page