ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ
ಕಾಸರಗೋಡು: ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರ ಅಧ್ಯಕ್ಷತೆಯಲ್ಲಿ ರಾಜ ಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರಗಿತು. ರಾಜಕೀಯ ಪಕ್ಷಗಳು, ಅಭ್ಯ ರ್ಥಿಗಳು ಚುನಾವಣೆ ನೀತಿಸಂಹಿತೆ ಯನ್ನು ಸರಿಯಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸುವುದಾದರೆ ಕ್ರಮ ಕೈಗೊಳ್ಳುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದರು. ರಾಜಕೀಯ ಪಕ್ಷದ ಪ್ರತಿನಿಧಿಗಳು ಮತದಾರರ ಯಾದಿಯ ಬಗ್ಗೆ ನೀಡಿದ ದೂರುಗಳ ಬಗ್ಗೆ ಚರ್ಚೆ ನಡೆಸಲಾಯಿತು. ದೂರಿನ ಸ್ಥಿತಿಗತಿಗಳ ಬಗ್ಗೆ ಸರಿಯಾಗಿ ರಾಜಕೀಯ ಪಕ್ಷದವರಿಗೆ ತಿಳಿಸಲು ಜಿಲ್ಲಾಧಿಕಾರಿ ನಿರ್ದೇಶ ನೀಡಿದರು.ಮತದಾನ ದಿನದಂದು ಎಲ್ಲಾ ಪಕ್ಷಗಳ ಬಿ.ಎಲ್.ಒ.ಗಳು ಬೂತ್ ಗಳಲ್ಲಿ ಇರಬೇಕೆಂದು, ಶಾಂತಿಯುತವಾಗಿ ಮತದಾನ ನಡೆಯಬೇಕಾಗಿದೆ ಎಂದೂ ಅವರು ನುಡಿದರು. ಜಿಲ್ಲಾಧಿಕಾರಿಗಳ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಕುಂಞಂಬು ನಂಬ್ಯಾರ್, ಟಿ.ಎಂ.ಎ. ಕರೀಂ, ಅಬ್ದುಲ್ಲ ಕುಂಞಿ ಚೆರ್ಕಳ, ವಿ. ರಾಜನ್, ಪಿ. ಅನಂತರಾಮ, ಕೆ.ಪಿ. ಸುರೇಶ್, ಫಾತಾಹ್ ಬಂಗರ, ಎ.ಆರ್.ಒಗಳಾದ ಸೂಫಿಯಾನ್ ಅಹಮ್ಮದ್, ಪಿ. ಶಾಜು, ನಿರ್ಮಲ್ ರೀತಾ ಗೋಮಸ್, ಪಿ. ಬಿನು ಮೋಳ್, ಜೆಗ್ಗಿ ಪೋಲ್, ಅಸಿಸ್ಟೆಂಟ್ ಕಲೆಕ್ಟರ್ ದಿಲೀಪ್ ಕೈನಿಕ್ಕರ, ವಿ. ಚಂದ್ರನ್, ಪಿ. ಅಖಿಲ್, ಪಿ. ಶಿಬು, ಅಬೂಬಕರ್ ಸಿದ್ದಿಖ್ ಭಾಗ ವಹಿಸಿದರು