ರಾಜೀನಾಮೆ ಇಲ್ಲ: ಬಿಗು ಭದ್ರತೆ
ನವದೆಹಲಿ: ದೆಹಲಿ ಮದ್ಯ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಯನ್ನು ಅರವಿಂದ ಕೇಜ್ರಿವಾಲ್‌ರನ್ನು ಇ.ಡಿ. ನಿನ್ನೆ ರಾತ್ರಿ ಬಂಧಿಸುವ ಮೂಲಕ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ರುವಾಗಲೇ ಬಂಧನಕ್ಕೊಳಗಾದ ದೇಶದ ಮೊದಲ ನಾಯಕ ಎನಿಸಿದ್ದಾರೆ.
ದಿಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಚಿವರಾಗಿದ್ದ ಸತ್ಯೇಂದ್ರ ಜೈನ್, ರಾಜ್ಯ ಸಭೆ ಸದಸ್ಯ ಸಂಜಯ್ ಸಿಂಗ್ ಮತ್ತು ತೆಲಂಗಾನದ ಬಿ.ಆರ್.ಎಸ್. ಪಕ್ಷದ ಶಾಸಕಿ ಕವಿತಾರನ್ನು ಇದೇ ಹಗರಣಕ್ಕೆ ಸಂಬಂಧಿಸಿ ಇ.ಡಿ ಈ ಹಿಂದೆಯೇ ಬಂಧಿಸಿದ್ದು, ಅವರು ಈಗ ಜೈಲಿನಲ್ಲಿ ಕಳೆಯುತ್ತಿದ್ದಾರೆ. ಇದಾದ ಬೆನ್ನಲ್ಲೇ ಸಿ.ಎಂ. ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಲಾಗಿದೆ.
ಬಂಧನಕ್ಕೊಳಗಾದ ಕೇಜ್ರಿವಾಲ್, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡೆನೆಂದೂ ಸ್ಪಷ್ಟಪಡಿಸಿದ್ದಾರೆ. ಜೈಲಿನೊಳಗಿದ್ದು ಕೊಂಡೇ ಸಿ.ಎಂ. ಕರ್ತವ್ಯ ನಿರ್ವಹಿಸುವುದಾಗಿ ಅವರು ತಿಳಿಸಿದ್ದಾರೆ.
ಬಂಧನದ ಬೆನ್ನಲ್ಲೇ ಅದನ್ನು ಪ್ರಶ್ನಿಸಿ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದು, ಅದನ್ನು ಸುಪ್ರಿಂಕೋರ್ಟ್ ಇಂದೇ ವಿಚಾರಣೆಗಾಗಿ ಕೈಗೆತ್ತಿಕೊಳ್ಳಲಿದೆ. ಈ ಮಧ್ಯೆ ಕೇಜ್ರಿವಾಲ್‌ರನ್ನು ತನಿಖಾ ಸಂಸ್ಥೆಯಾದ ಇ.ಡಿ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ. ಇ.ಡಿಯ ಹಿರಿಯ ಅಧಿಕಾರಿಗಳು ಕೇಜ್ರಿವಾಲ್‌ರನ್ನು ಈಗ ತೀವ್ರ ವಿಚಾರಣೆಗೊಳಪಡಿಸುತ್ತಿದ್ದು, ಅವರ ಹೇಳಿಕೆಗಳನ್ನು ದಾಖಲಿಸತೊಡಗಿದ್ದಾರೆ. ಆ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಂಧನದ ವಿರುದ್ಧ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ಒಂದು ವೇಳೆ ಸುಪ್ರೀಂಕೋರ್ಟ್ ವಜಾಗೈದಲ್ಲಿ, ಅದು ಕೇಜ್ರಿವಾಲ್ ಮಾತ್ರವಲ್ಲ ಅವರ ಪಕ್ಷವಾದ ಅಮ್ ಆದ್ಮಿ ಪಾರ್ಟಿ (ಎಎಪಿ)ಗೆ ತೀವ್ರ ಈ ಚುನಾವಣೆ ವೇಳೆಯಲ್ಲಿ ತೀವ್ರ ಆಘಾತ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಮಾತ್ರವಲ್ಲ ಅದರ ಹೆಸರಲ್ಲಿ ಕೇಜ್ರಿವಾಲ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಯೂ ಬರಲಿದೆ ಮಾತ್ರವಲ್ಲದೆ, ಜೈಲು ಸೇರುವ ಸಾಧ್ಯತೆಯೂ ಇದೆ.