ರಾಜ್ಯದಲ್ಲಿ ಆರು ರೈಲುಗಳ ಸಂಚಾರ ರದ್ದು


ತಿರುವನಂತಪುರ: ರಾಜ್ಯದಲ್ಲಿ ಸಂಚರಿಸುವ ನಾಲ್ಕು ಪ್ರತಿವಾರ ರೈಲುಗಳು ಸಹಿತ ಆರು ಪ್ರತ್ಯೇಕ ರೈಲುಗಳ ಸಂಚಾರವನ್ನು ರದ್ದುಗೊಳಿ ಲಾಗಿದೆ. ರೈಲಿನ ವ್ಯವಹಾರ, ಸುರಕ್ಷಾ ಸಮಸ್ಯೆಗಳನ್ನು ಮುಂದಿರಿಸಿ ಸಂಚಾರ ನಿಲುಗಡೆಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಶನಿವಾರಗಳಂದು ಸಂಚರಿಸುವ ಮಂಗಳೂರು- ಕೊಯಂಬತ್ತೂರು ಪ್ರತಿವಾರ ರೈಲು ಜೂನ್ 8ರಿಂದ 29ರವರೆಗೆ ಸಂಚಾರ ರದ್ದುಪಡಿಸ ಲಾಗಿದೆ. ಇದೇ ವೇಳೆ ಮೇ 25, ಜೂನ್ 1ರ ಸಂಚಾರವನ್ನು ಕೂಡಾ ನಿಲ್ಲಿಸಲಾಗಿದೆ. ಮಂಗಳೂರು- ಕೋಟ್ಟಯಂ ಪ್ರತ್ಯೇಕ ರೈಲನ್ನು ರೈಲ್ವೇ ಈ ಮೊದಲೇ ರದ್ದುಪಡಿಸಿತು. ಎಪ್ರಿಲ್ 20ರಿಂದ ಜೂನ್ 1ರವರೆಗೆ ಶನಿವಾರಗಳಂದು ಸಂಚರಿಸುವ ರೀತಿಯಲ್ಲಿ ಈ ರೈಲನ್ನು ಘೋಷಿಸಲಾಗಿತ್ತು. ಎಪ್ರಿಲ್ 20ರಂದು ಇದು ಓಡಾಟ ನಡೆಸಿದೆ.
ಕೆಲಸದ ಭಾರ ಕಡಿಮೆ ಮಾಡಬೇಕೆಂದು ಆಗ್ರಹಿಸಿ ಜೂನ್ 1ರಿಂದ ದಕ್ಷಿಣ ರೈಲ್ವೇಯ ಲೋಕೊ ಪೈಲಟ್ಗಳು ಮುಷ್ಕರ ಘೋಷಿಸಿದ್ದಾರೆ. ಶಾಲೆಗಳು ತೆರೆಯುವ ಸಮಯದಲ್ಲೇ ಪ್ರಯಾಣ ಸಮಸ್ಯೆ ಹೆಚ್ಚಾಗಬಹುದಾಗಿದ್ದು, ಇದೇ ವೇಳೆ ರೈಲ್ವೇ ರೈಲು ಸಂಚಾರವನ್ನು ಮೊಟಕುಗೊಳಿಸಿದೆ. ಮಂಗಳೂರು- ಕೊಯಂಬತ್ತೂರು ಪ್ರತಿವಾರ ರೈಲು, ಕೊಯಂ ಬತ್ತೂರು- ಮಂಗಳೂರು ಪ್ರತಿವಾರ ರೈಲು, ಕೊಚ್ಚುವೇಳಿ -ನಿಜಾಮು ದ್ದೀನ್ ಪ್ರತಿವಾರ ರೈಲು, ನಿಜಾ ಮುದ್ದೀನ್- ಕೊಚ್ಚುವೇಳಿ ಪ್ರತಿ ವಾರ ರೈಲು, ಚೆನ್ನೈ- ವೆಳಾಂಗಣ್ಣಿ, ವೆಳಾಂಗಣ್ಣಿ-ಚೆನ್ನೈ ಎಂಬೀ ರೈಲುಗಳನ್ನು ರದ್ದುಗೊಳಿಸಲಾಗಿದೆ.

RELATED NEWS

You cannot copy contents of this page