ರಾಜ್ಯದಲ್ಲಿ ಇಂದು ಜಡಿಮಳೆಗೆ ಸಾಧ್ಯತೆ
ತಿರುವನಂತಪುರ: ರಾಜ್ಯದಲ್ಲಿ ಇಂದು ಜಡಿಮಳೆ ಸುರಿಯುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದ್ದು ಆದ್ದರಿಂದ ರಾಜ್ಯದ ಎಲ್ಲಾ ಜಿಲ್ಲೆಗ ಳಲ್ಲೂ ಭಾರೀ ಜಾಗ್ರತಾ ನಿರ್ದೇಶ ನೀಡಲಾಗಿದೆ. ಬಂಗಾಲಕೊಲ್ಲಿಯಲ್ಲಿ ಮತ್ತೆ ಭಾರೀ ವಾಯುಭಾರ ಕುಸಿತವುಂಟಾ ಗಿದ್ದು, ಅದು ಕೇರಳದಲ್ಲಿ ಮಳೆ ಪ್ರಭಾ ವವನ್ನು ಇನ್ನಷ್ಟು ತೀವ್ರಗೆಳಿಸಲಿದೆ. ಆ ಹಿನ್ನೆಲೆಯಲ್ಲಿ ಕಾಸರಗೋಡು, ಕ ಣ್ಣೂರು, ವಯನಾಡು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆಲಪ್ಪುಳ, ಪತ್ತನಂತಿಟ್ಟ, ಕೋಟ್ಟಯಂ, ಇಡುಕ್ಕಿ, ಎರ್ನಾಕುಳಂ, ತೃಶೂರು ಮತ್ತು ಪಾಲ್ಘಾಟ್ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಿರೀಕ್ಷೆಗಿಂತಲೂ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ. ಅದು ಕೆಲವೊಮ್ಮೆ ಭಾರೀ ಪ್ರವಾಹ ಸೃಷ್ಟಿಗೂ ಹಾಗೂ ಭೂ ಕುಸಿತಕ್ಕೂ ದಾರಿ ಮಾಡಿಕೊಡಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಸರಕಾರ ತೀವ್ರ ಜಾಗ್ರತೆ ಪಾಲಿಸಬೇಕೆಂದು ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದ ಹೆಚ್ಚಿನ ಎಲ್ಲಾ ಅಣೆಕಟ್ಟುಗಳಲ್ಲೂ ನೀರು ತುಂಬಿಕೊಂಡಿದೆ. ಅದರಿಂದಾಗಿ ಹಲವು ಅಣೆಕಟ್ಟುಗಳ ಶಟರ್‌ಗಳನ್ನು ತೆರೆದು ನೀರು ಹೊರಬಿಡಲಾಗುತ್ತಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಕಣ್ಣೂರು, ಕೋಟ್ಟಯಂ, ತೃಶೂರು, ಆಲಪ್ಪುಳ, ವಯನಾಡ್, ಇಡುಕ್ಕಿ, ಪಾಲ್ಘಾಟ್, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಇಂದು ಎಲ್ಲಾ ಶಾಲೆಗಳಿಗೆ ರಜೆ ಸಾರಲಾಗಿದೆ. ಭಾರೀ ಮಳೆಯಿಂದ ಸೃಷ್ಟಿಯಾದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ರಾಜ್ಯದಲ್ಲಿ ನಿನ್ನೆ ಎಂಟು ಮಂದಿ ಪ್ರಾಣ ಕಳದುಕೊಂಡಿದ್ದಾರೆ.