ರಾಜ್ಯದಲ್ಲಿ ಇಂದು ಮಳೆಗೆ ಸಾಧ್ಯತೆ ಎಲ್ಲೆಡೆ ಜಾಗ್ರತಾ ನಿರ್ದೇಶ

ತಿರುವನಂತಪುರ: ರಾಜ್ಯದಲ್ಲಿ ಇಂದು ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಮಾತ್ರವಲ್ಲ ತಿರುವನಂತಪುರದ ವಿಳಿಂಞದಿಂದ ಕಾಸರಗೋಡು ತನಕ ಸಮುದ್ರದಲ್ಲಿ ಇಂದು ರಾತ್ರಿ ೧೧.೩೦ರ ತನಕ ೧.೦ ಮೀಟರ್‌ನಿಂದ ೩.೦ ಮೀಟರ್ ಎತ್ತರದಲ್ಲಿ ಆಳೆತ್ತರದ ಅಲೆಗಳು ಎದ್ದೇಳುವ ಸಾಧ್ಯತೆ ಇದೆ. ಭಾರೀ ಕಡಲ್ಕೊರೆತ ಉಂಟಾಗುವ ಸಾಧ್ಯತೆಯೂ ಇದೆ. ಆದ್ದರಿಂದ ವಿಶೇಷವಾಗಿ ಸಮುದ್ರ ಕರಾವಳಿ ಪ್ರದೇಶಗಳಲ್ಲಿ ವಾಸಿಸುವವರು ಗರಿಷ್ಠ ಜಾಗ್ರತೆ ಪಾಲಿಸಬೇಕು. ಮೀನುಗಾರರು ಯಾವುದೇ ಕಾರಣಕ್ಕೂ ಮೀನುಗಾರಿಕೆ ಗಾಗಿ ಸಮುದ್ರ ಕ್ಕಿಳಿಯಬಾರದು. ಬೀಚ್ ಸಂದರ್ಶನವನ್ನು ಎಲ್ಲರೂ ಹೊರತುಪಡಿಸಬೇಕು.

RELATED NEWS

You cannot copy contents of this page