ರಾಜ್ಯದಲ್ಲಿ ಎರಡು ವಾರದಲ್ಲಿ ಎರಡು ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ: 10 ಸಾವು

ಕಾಸರಗೋಡು: ರಾಜ್ಯದಲ್ಲಿ ವಿವಿಧ ರೀತಿಯ ಸಾಂಕ್ರಾಮಿಕ ರೋಗ ಹರಡತೊಡಗಿದ್ದು, ಇದರ ಪರಿಣಾಮ ಕಳೆದ ಎರಡು ವಾರದಲ್ಲಿ ಮಾತ್ರವಾಗಿ ಎರಡು ಲಕ್ಷದಷ್ಟು ಮಂದಿಗೆ ಈ ರೋಗ ತಗಲಿದೆ. ಇದರಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಮಾತ್ರವಲ್ಲ ಕಳೆದ 5 ತಿಂಗಳ ಮಧ್ಯೆ ಇಂತಹ ರೋಗಕ್ಕೆ ರಾಜ್ಯದಲ್ಲಿ ಒಟ್ಟಾರೆಯಾಗಿ 91 ಮಂದಿ ಬಲಿಯಾಗಿದ್ದಾರೆ. ಇದರ ಹೊರತಾಗಿ ಅಮೀಬಿಕ್ ಮೆಂಜಾಯನ್ಸೆಫಾ ಲೈಟೀಸ್ ಎಂಬ ಹೆಸರಿನ ಮಿದುಳಿಗೆ ತಗಲುವ ಅತ್ಯಪೂರ್ವ ರೋUವೂ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಇದು ಮಾತ್ರವಲ್ಲದೆ ವೆಸ್ಟ್ ನೈಲ್ ಜ್ವರವೂ ಇನ್ನೊಂದೆಡೆ ಹರಡತೊಡಗಿದೆ.
ತಾಪಮಾನ ಏರಿಕೆಯ ಜೊತೆಗೆ ಪದೇ ಪದೇ ಸುರಿಯುತ್ತಿರುವ ಬೇಸಿಗೆ ಮಳೆ ಮತ್ತು ತ್ಯಾಜ್ಯ ಸಮಸ್ಯೆಗಳೇ ಸಾಂಕ್ರಾಮಿಕ ರೋಗಗಳು ಅತೀ ಹೆಚ್ಚು ಹರಡಲು ಕಾರಣವಾಗುತ್ತಿದೆಯೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿ ದ್ದಾರೆ. ಮಲಪ್ಪುರಂ ಮತ್ತು ಕಲ್ಲಿಕೋಟೆ ಜಿಲ್ಲೆ ಗಳಲ್ಲೇ ಇಂತಹ ಸಾಂಕ್ರಾಮಿಕ ರೋಗಗಳು ಅತೀ ಹೆಚ್ಚು ಹರಡತೊಡಗಿದೆ.
ಡೆಂಗ್ಯೂ, ಹಳದಿಕಾಮಾಲೆ, ಇಲಿಜ್ವರ, ಎಚ್1ಎನ್1, ಸಿಡುಬು ರೋಗ, ಮಲೇರಿಯ, ಮಂಗನಕಾಯಿಲೆ, ಜಲಸಂಬAಧಿತ ರೋಗಗಳು ಇತ್ಯಾದಿ ರಾಜ್ಯದಲ್ಲಿ ಇತ್ತೀಚೆಗಿನಿಂದ ಅತೀ ಹೆಚ್ಚಾಗಿ ಹರಡತೊಡಗಿದೆ. ಹೆಚ್ಚುತ್ತಿರುವ ಜನ ಸಾಂಧತೆ, ಜೀವನ ಶೈಲಿ ರೀತಿ, ಹವಾಮಾನ ವೈಪರೀತ್ಯ, ಭೌಗೋಳಿಕ ಭಿನ್ನತೆ ಇತ್ಯಾದಿಗಳೇ ಸಾಂಕ್ರಾಮಿಕ ರೋಗ ಅತೀ ಹೆಚ್ಚ ಹರಡಲು ಪ್ರಧಾನ ಕಾರಣವಾಗುತ್ತಿದೆಯೆಂದು ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಕಳೆದ ಎರಡು ವಾರದಲ್ಲಿ ಒಟ್ಟಾರೆಯಾಗಿ 78,718 ಮಂದಿಯಲ್ಲಿ ವಿವಿಧ ರೀತಿಯ ಸಾಂಕ್ರಾಮಿಕ ರೋಗ, 971 ಮಂದಿಯಲ್ಲಿ ಸಿಡುಬು, 328 ಮಂದಿಯಲ್ಲಿ ಡೆಂಗ್ಯೂ, 20 ಮಂದಿಯಲ್ಲಿ ಮಲೇರಿಯ, 70 ಮಂದಿಯಲ್ಲಿ ಇಲಿಜ್ವರ, 37 ಮಂದಿಗೆ ಎಚ್1ಎನ್1, ನಾಲ್ವರಿಗೆ ಶಿಗೆಲ್ಲಾ ಮತ್ತು 9 ಮಂದಿಯಲ್ಲಿ ವೆಸ್ಟ್ ನೈಲ್ ರೋಗ ತರಲಿರುವುದನ್ನು ದೃಢೀಕರಿಸಲಾಗಿದೆ. ಇದರಲ್ಲಿ ಕಳೆದ 9 ತಿಂಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ 3 ಮಂದಿ, ಮಲೇರಿಯಾಕ್ಕೆ 3 ಮಂದಿ, ಡೆಂಗ್ಯೂಗೆ 16 ಮಂದಿ, ಇಲಿಜ್ವರಕ್ಕೆ 39 ಮಂದಿ, ಹೈಪರಿಟೀಸ್-ಎಗೆ 13 ಮಂದಿ, ಹೈಪರಿಟೀಸ್-3ಗೆ 10 ಮಂದಿ, ಸಿಡುಬುರೋಗಕ್ಕೆ 4 ಮಂದಿ ಬಲಿಯಾಗಿದ್ದಾರೆ. ಹೀಗೆ ಕಳೆದ 5 ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟಾರೆಯಾಗಿ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು 91 ಮಂದಿಯ ಪ್ರಾಣ ಅಪಹರಿಸಿದೆ. ಆದ್ದರಿಂದ ಜನರು ಈಬಗ್ಗೆ ಗರಿಷ್ಠ ಜಾಗ್ರತೆ ಪಾಲಿಸಿ ಮನೆ ಮತ್ತು ಪರಿಸರ ಪ್ರದೇಶಗಳನ್ನು ಸದಾ ಶುಚೀಕರಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page