ರಾಜ್ಯದಲ್ಲಿ ಬಿರುಗಾಳಿ, ಜಡಿ ಮಳೆಗೆ ಸಾಧ್ಯತೆ: ಎಲ್ಲೆಡೆ ಜಾಗ್ರತಾ ನಿರ್ದೇಶ
ತಿರುವನಂತಪುರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಡಿಮಳೆ, ಬಿರುಗಾಳಿ ಬೀಸುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇದರಂತೆ ರಾಜ್ಯದ ಹಲವೆಡೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಳೆ ಮತ್ತು ಬಿರುಗಾಳಿ ಹೊರತಾಗಿ ಸಮುದ್ರಲ್ಲಿ ಆಳೆತ್ತರದ ಅಲೆಗಳೂ ಎದ್ದೇಳುವ ಸಾಧ್ಯತೆ ಇದೆ. ಇಂದು ರಾತ್ರಿ 11.30ರಿಂದ ಸಮುದ್ರದಲ್ಲಿ 1.2 ಮೀಟರ್‌ನಷ್ಟು ಎತ್ತರದ ಅಲೆಗಳು ಎದ್ದೇಳಲಿದೆ. ಮಾತ್ರವಲ್ಲ ಇದು ಕಡಲ್ಕೊರೆತಕ್ಕೂ ದಾರಿಮಾಡಿಕೊಡಲಿದೆ.
ಆದ್ದರಿಂದ ಮೀನುಗಾರರು ಹಾಗೂ ಸಮುದ್ರ ತೀರಪ್ರದೇಶ ನಿವಾಸಿಗಳು ಗರಿಷ್ಠ ಜಾಗ್ರತೆ ಪಾಲಿಸಬೇಕು. ಸಮುದ್ರ ತೀರಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪವೂ ಉಂಟಾಗುವ ಸಾಧ್ಯತೆಯಿರುವುದರಿಂದ ಸಮುದ್ರ ದಡ ಬಳಿ ವಾಸಿಸುವವರು ತಾತ್ಕಾಲಿಕವಾಗಿ ತಮ್ಮ ವಾಸ ಬದಲಾಯಿಸುವಂತೆ ಇಲಾಖೆ ನಿರ್ದೇಶ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಉಂಟಾಗಲಿದೆ. ಕಣ್ಣೂರು, ಕೋಟ್ಟಯಂ, ಎರ್ನಾಕುಳಂ ಮತ್ತು ಆಳಪ್ಪುಳದಲ್ಲಿ ಭಾರೀ ಮಳ ಉಂಟಾಗುವಸಾಧ್ಯತೆ ಇದೆಯೆಂದು ಇಲಾಖೆ ಹೇಳಿದೆ.