ರಾಜ್ಯದಲ್ಲಿ ಮತ್ತೆ ನಿಫಾ ವೈರಸ್ ಭೀತಿ: ಬಾವಲಿಗಳಲ್ಲೂ ವೈರಸ್ ಪತ್ತೆ
ತಿರುವನಂತಪುರ: ರಾಜ್ಯದಲ್ಲಿ ಬಾವಲಿಗಳಲ್ಲಿ ಮತ್ತೆ ನಿಫಾ ವೈರಸ್ ಪತ್ತೆಯಾಗಿದೆ. ಆ ಮೂಲಕ ನಿಫಾ ವೈರಸ್ ಭೀತಿಯೂ ಎದುರಾಗಿದೆ. ಮಲ ಪ್ಪುರಂ ಜಿಲ್ಲೆಯ ಪಾಂಡಿಕ್ಕಾಡಿನ ಬಳಿ ಯ ಐದು ಕಿಲೋ ಮೀಟರ್ ವ್ಯಾಪ್ತಿ ಯೊಳಗೆ ಸಂಗ್ರಹಿಸಲಾದ 27 ಬಾವಲಿ ಗಳ ಮಾದರಿಗಳಲ್ಲಿ ನಿಫಾ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ. ನಿಫಾ ಪ್ರೋಟೋಕಾಲ್ ಪ್ರಕಾರ ನಡೆಸಿದ ಸೋಂಕಿನ ವ್ಯಕ್ತಿಯ ಸಂಪರ್ಕ ಪಟ್ಟಿಯಲ್ಲಿರುವವರ ಎಲ್ಲಾ ಪರೀಕ್ಷೆಗಳೂ ಇದುವರೆಗೆ ನಕಾರಾತ್ಮಕವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.ಒಟ್ಟು ೪೭೨ ಮಂದಿ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಮತ್ತು ಕಡ್ಡಾಯವಾಗಿ 21 ದಿನಗಳ ಪ್ರತ್ಯೇಕ ಅವಧಿಯನ್ನು ಪೂರ್ಣಗೊಳಿಸಿದ 291 ವ್ಯಕ್ತಿಗಳನ್ನು ಪಟ್ಟಿಯಿಂದ ಹೊರತುಪಡಿಸ ಲಾಗಿದೆ ಎಂದು ಸಚಿವರು ತಿಳಿಸಿದರು.
ಪಾಂಡಿಕ್ಕಾಡ್‌ನಲ್ಲಿ ಜುಲೈ ತಿಂಗಳಲ್ಲಿ ನಿಫಾ ಸೋಂಕಿನ 14 ವರ್ಷದ ಬಾಲಕ ಸಾವನ್ನಪ್ಪಿದ್ದನು. ಹಣ್ಣುಗಳನ್ನು ತಿನ್ನುವ ಬಾವಲಿಗಳ ಮೂಲಕ ಈ ಸೋಂಕು ಹರಡುತ್ತಿದೆ. ನಿಫಾ ವೈರಸ್ ಒಂದು ಝಾನೋಟಿಕ್ ವೈರಸ್ ಒಂದು ಸೋಂಕಿನ ಪ್ರಾಣಿಗಳು ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಗೆ ಹರಡುತ್ತಿದೆ.