ರಾಜ್ಯದಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸುಗೊಳ್ಳಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಸೌರಾಷ್ಟ್ರ ಕಚ್ ಪ್ರದೇಶಗಳ ಮೇಲೆ ಸೃಷ್ಟಿಯಾದ ವಾಯುಭಾರ ಕುಸಿತ ಇಂದು ಅರಬಿ ಸಮುದ್ರಕ್ಕೆ ತಲುಪಲಿರುವುದರಿಂದ ಕೇರಳದಲ್ಲಿ ಮಳೆ ತೀವ್ರಗೊಳ್ಳಲಿದೆ. ಇಂದಿನಿಂದ ಮುಂದಿನ ಐದು ದಿನ ವ್ಯಾಪಕ ಮಳೆ ಸುರಿಯಲು ಸಾಧ್ಯತೆ ಇದೆಯೆಂದು ತಿಳಿಸಲಾಗಿದೆ. ಮಳೆಯ ಜೊತೆಗೆ ಸಿಡಿಲು ಕೂಡಾ ಉಂಟಾಗಲಿದ್ದು, ಇದರಿಂದ ಜನರು ಜಾಗ್ರತರಾಗಿರ ಬೇಕೆಂದೂ ತಿಳಿಸಲಾಗಿದೆ.

You cannot copy contents of this page