ರಾಜ್ಯದಲ್ಲಿ ಹದಗೆಟ್ಟಿದ್ದು 1730 ಕಿ.ಮೀ. ರಸ್ತೆ: 49 ಗುತ್ತಿಗೆದಾರರ ಲೈಸನ್ಸ್ ರದ್ದು
ಕಾಸರಗೋಡು: ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಒಟ್ಟು 882 ರಸ್ತೆಗಳಿದ್ದು, ಅದರಲ್ಲಿ 1730 ಕಿ.ಮೀ. ರಸ್ತೆಗಳು ಭಾರೀ ಮಳೆ ಇತ್ಯಾದಿ ಕಾರಣಗ ಳಿಂದಾಗಿ ಈಗ ಹದಗೆಟ್ಟಿದೆ ಎಂದು ಲೋಕೋಪ ಯೋಗಿ ಖಾತೆ ಸಚಿವ ಪಿ.ಎ. ಮೊಹ ಮ್ಮದ್ ರಿಯಾಸ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಹದಗೆಟ್ಟ ಇಂತಹ ರಸ್ತೆಗಳ ನವೀಕರಣೆಗೆ 852.78 ಕೋಟಿ ರೂ.ಗಳು ಬೇಕಾಗಿ ಬರಲಿದೆ. ಫ್ಲಡ್ ಪ್ಯಾಕೇಜ್ ಅಥವಾ ಸಾಲ ಪಡೆಯುವ ಮೂಲಕ ಈ ಹಣ ಕಂಡುಕೊಳ್ಳಬೇಕಾಗಿದೆ. ಇದರ ಹೊರತಾಗಿ ಜಲ್ ಜೀವನ್ ಯೋಜನೆಯ ಅಂಗವಾಗಿ ಯೂ ನಿರ್ಮಾಣ ಕೆಲಸ ನಡೆಸುತ್ತಿದೆ ಯೆಂದು ಸಚಿವರು ತಿಳಿಸಿದ್ದಾರೆ.
ಸರಿಯಾದ ರೀತಿಯಲ್ಲಿ ರಸ್ತೆ ಕೆಲಸ ನಿರ್ವಹಿಸದ 54 ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 49 ಗುತ್ತಿಗೆದಾರರ ನ್ನು ಕಪ್ಪು ಯಾದಿಯಲ್ಲಿ ಒಳಪಡಿಸಲಾಗಿದೆ. 4 ಮಂದಿಯನ್ನು ಈ ಯಾದಿಯಿಂದ ಹೊರತು ಪಡಿಸಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ. ರಾಜ್ಯದ 140 ವಿಧಾನಸಭಾ ಕ್ಷೇತ್ರಗಳ ರಸ್ತೆಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆಯೆಂದು ಅವರು ತಿಳಿಸಿದ್ದಾರೆ.