ರಾಜ್ಯದಲ್ಲಿ ೭ ಲಕ್ಷ ಕುಟುಂಬಗಳಿಗೆ ಸ್ವಂತವಾಗಿ ಮನೆ ಇಲ್ಲ
ಕಾಸರಗೋಡು: ರಾಜ್ಯದಲ್ಲಿ ಸುಮಾರು ಏಳು ಲಕ್ಷ ಕುಟುಂಬಗಳು ಸ್ವಂತವಾಗಿ ಇನ್ನೂ ಮನೆ ಹೊಂದಿಲ್ಲವೆಂದು ಲೆಕ್ಕ ಹಾಕಲಾಗಿದೆ ಎಂದು ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ. ರಾಜೇಶ್ ತಿಳಿಸಿದ್ದಾರೆ. ೨೦೧೭ರಿಂದ ಈ ವರ್ಷ ಅಕ್ಟೋಬರ್ ೩೧ರ ತನಕದ ಸ್ಥಳೀಯಾಡಳಿತ ಸಂಸ್ಥೆಗಳ ಲೆಕ್ಕಾಚಾರ ಪ್ರಕಾರ ಸ್ವಂತವಾಗಿ ಮನೆ ಇಲ್ಲದ ೩,೫೬,೧೦೮ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗಿದೆ. ೧.೨೬ ಲಕ್ಷ ಮನೆ ನಿರ್ಮಾಣ ಕೆಲಸ ಇನ್ನೂ ಪೂರ್ಣಗೊಳ್ಳದೆ ಈಗ ಅರ್ಧದಲ್ಲೇ ಉಳಿದುಕೊಂಡಿದೆ. ಅದನ್ನು ಪೂರ್ತೀ ಕರಿಸುವ ಯತ್ನ ನಡೆಸಲಾ ಗುತ್ತಿದೆ.
ಸ್ವಂತವಾಗಿ ನಿವೇಶನ ಹೊಂದದ ಎಲ್ಲಾ ಕುಟುಂಬಗಳಿಗೆ ಸ್ವಂತವಾಗಿ ಮನೆ ನಿರ್ಮಿಸಿಕೊಡ ಬೇಕೆಂಬು ವುದು ಸರಕಾರದ ಗುರಿಯಾಗಿದೆ. ಆ ಮೂಲಕ ಕೇರಳವನ್ನು ನಿವೇಶನ ರಹಿತರಿಲ್ಲದ ರಾಜ್ಯವನ್ನಾಗಿಸುವ ಪರಿಕಲ್ಪನೆ ಸರಕಾರ ಹೊಂದಿದೆ ಎಂದೂ ಅವರು ಹೇಳಿದ್ದಾರೆ.