ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ
ಕಾಸರಗೋಡು: ರಾಜ್ಯದ ಕೆಲವೆಡೆ ಗುರುವಾರವರೆಗೆ ಮಳೆಗೆ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಿರುವನಂತಪುರ, ಪತ್ತನಂತಿಟ್ಟ, ಕೊಲ್ಲಂ ಜಿಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆವರೆಗೆ ಕೇರಳ, ತಮಿಳ್ನಾಡು ಕರಾವಳಿಯಲ್ಲೂ ತೀವ್ರ ಅಲೆ ಬಡಿಯಲು ಸಾಧ್ಯತೆ ಇದೆಯೆಂದೂ ರಾಷ್ಟ್ರೀಯ ಸಮುದ್ರ ಸ್ಥಿತಿ ಅಧ್ಯಯನ ಇಲಾಖೆ ಮುನ್ಸೂಚನೆ ನೀಡಿದೆ. ಈ ಪ್ರದೇಶಗಳಲ್ಲಿರುವವರು ಜಾಗ್ರತೆ ಪಾಲಿಸುವಂತೆ ತಿಳಿಸಲಾಗಿದೆ.