ರಾಜ್ಯಪಾಲರಿಗೆ ಝೆಡ್ ಕೆಟಗರಿ ಭದ್ರತೆ: ತಮಗೆ ಮಾಹಿತಿ ಲಭಿಸಿಲ್ಲವೆಂದು ಕೇರಳ
ತಿರುವನಂತಪುರ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌ರಿಗೆ ಝೆಡ್ ಕೆಟಗರಿ ನೀಡಿರುವ ವಿಷಯವನ್ನು ತಮಗೆ ತಿಳಿಸಿಲ್ಲವೆಂದು ರಾಜ್ಯ ಸರಕಾರ ಇನ್ನೊಂದೆಡೆ ಹೇಳಿದೆ. ಕಳೆದ ಶನಿವಾರದಂದು ಕೊಲ್ಲಂನಲ್ಲಿ ರಾಜ್ಯಪಾಲರ ವಿರುದ್ಧ ಎಸ್‌ಎಫ್‌ಐ ಕಾರ್ಯಕರ್ತರು ಕರಿಪತಾಕೆ ಪ್ರದರ್ಶಿಸಿ ಅವರನ್ನು ತಡೆಯಲೆತ್ನಿಸಿದ್ದ ವಿರುದ್ಧ ಗರಂಗೊಂಡ ರಾಜ್ಯಪಾಲರು ಎರಡು ತಾಸುಗಳ ತನಕ ರಸ್ತೆಬದಿಯ ಅಂಗಡಿಯೊಂದರ ಮುಂದೆ ಕುಳಿದು ಭದ್ರತೆ ಒದಗಿಸುವಲ್ಲಿ ಪೊಲೀಸರ ವೈಫಲ್ಯ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ತನ್ನನ್ನು ತಡೆದ ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ ಬಳಿಕವಷ್ಟೇ ರಾಜ್ಯಪಾಲರು ಅಲ್ಲಿಂದ ತೆರಳಿದ್ದರು. ಇದಾದ ಬೆನ್ನಲ್ಲೇ ಸಿಆರ್‌ಪಿಎಫ್‌ನ
೦ ಅಧಿಕಾರಿಗಳನ್ನು ತಂಡ ತಿರುವನಂತಪುರಕ್ಕೆ ಆಗಮಿಸಿ ರಾಜ್ಯಪಾಲರಿಗೆ ಝೆಡ್ ಕೆಟಗರಿ ಭದ್ರತೆ ಒದಗಿಸಿತ್ತು. ಆದರೆ ಆ ವಿಷಯವನ್ನು ಕೇಂದ್ರ ಸರಕಾರ ತಮಗೆ ತಿಳಿಸಿಲ್ಲವೆಂದು ರಾಜ್ಯ ಸರಕಾರ ಹೇಳಿದ್ದು, ಅದು ಭಾರೀ ಗೊಂದಲ ಸೃಷ್ಟಿಗೂ ದಾರಿ ಮಾಡಿಕೊಟ್ಟಿದೆ.