ರಾಜ್ಯ ಶಾಲಾ ಕಲೋತ್ಸವಕ್ಕೆ ಮುಖ್ಯಮಂತ್ರಿಯಿಂದ ವಿದ್ಯುಕ್ತ ಚಾಲನೆ
ತಿರುವನಂತಪುರ: ರಾಜ್ಯ ರಾಜಧಾನಿಯಾದ ತಿರುವನಂತಪುರ ದಲ್ಲಿ ಬೆಳಿಗ್ಗೆ ಆರಂಭಗೊಂಡ 63ನೇ ರಾಜ್ಯ ಶಾಲಾ ಕಲೋತ್ಸವಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೀಪ ಬೆಳಗಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಚಿವರುಗಳೂ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನ ಎಂ.ಟಿ. ನಿಲಾ ಪ್ರಧಾನ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಒಟ್ಟು 25 ವೇದಿಕೆಗಳಲ್ಲಾಗಿ ಜನವರಿ 8ರ ತನಕ ಕಲೋತ್ಸವ ಮುಂದುವರಿಯಲಿದೆ. ಶಾಲಾ ಕಲೋತ್ಸವದಲ್ಲಿ ರಾಜ್ಯದ 14 ಜಿಲ್ಲೆಗಳಿಂದ 15,000ದಷ್ಟು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಒಟ್ಟು 249 ಸ್ಪರ್ಧೆಗಳು ನಡೆಯಲಿದೆ.
ಶಾಲಾ ಕಲೋತ್ಸವ ರಾಜಧಾನಿಯನ್ನು ಇಂದಿನಿಂದ ಮುಂದಿನ ಐದು ದಿನಗಳ ತನಕ ಕಲಾ ಸಾಗರದಲ್ಲಿ ಮುಳುಗಿಸಲಿದೆ. ಎಲ್ಲಾ ಸ್ಪರ್ಧಾಳುಗಳೂ ಇದರಲ್ಲಿ ಅತ್ಯಂತ ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದಾರೆ. 8ರಂದು ಸಂಜೆ 5 ಗಂಟೆಗೆ ಕಲೋ ತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಅದನ್ನು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಉದ್ಘಾಟಿಸುವರು. ಸಿನಿಮಾ ನಟ ಟೋಮಿನೋ ಥೋಮಸ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.