ರಾಜ್ಯ ಶಾಲಾ ಕಲೋತ್ಸವ ಜನವರಿ 7ರಿಂದ ತೃಶೂರಿನಲ್ಲಿ
ತಿರುವನಂತಪುರ: 64ನೇ ಕೇರಳ ರಾಜ್ಯ ಶಾಲಾ ಕಲೋತ್ಸವದ ದಿನಾಂಕಗಳನ್ನು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಘೋಷಿಸಿದ್ದಾರೆ. 2026 ಜನವರಿ 7ರಿಂದ 11ರ ವರೆಗೆ ತೃಶೂರು ಜಿಲ್ಲೆಯಲ್ಲಿ ಕಲೋತ್ಸವ ನಡೆಯಲಿದೆ. ಕಲೋತ್ಸವಕ್ಕೆ 25ರಷ್ಟು ವೇದಿಕೆಗಳನ್ನು ನಿರ್ಮಿಸಲಾಗುವುದು. ಸಂಸ್ಕೃತೋತ್ಸವ, ಅರಬಿಕ್ ಸಾಹಿತ್ಯೋತ್ಸವವನ್ನು ಇದರೊಂದಿಗೆ ನಡೆಸಲಾಗುವುದು. ರಾಜ್ಯ ಕಲೋತ್ಸವದ ಪೂರ್ವಭಾವಿಯಾಗಿ ಶಾಲಾ ಮಟ್ಟದ ಸ್ಪರ್ಧೆಗಳನ್ನು ಸೆಪ್ಟಂಬರ್ ತಿಂಗಳಲ್ಲೂ, ಉಪಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಅಕ್ಟೋಬರ್ ದ್ವಿತೀಯ ವಾರದಲ್ಲೂ, ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ನವಂಬರ್ ತಿಂಗಳ ಮೊದಲ ವಾರ ಪೂರ್ತಿಗೊಳಿಸಬೇಕಾಗಿದೆ. 2025-26ನೇ ಶೈಕ್ಷಣಿಕ ವರ್ಷದ ರಾಜ್ಯ ಶಾಲಾ ಕ್ರೀಡಾ ಸ್ಪರ್ಧೆಗಳು ತಿರುವನಂತಪುರದಲ್ಲಿ ನಡೆಯಲಿದೆ.