ರಾಜ್ಯ ಸಹಕಾರಿ ಕೃಷಿ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ ಜೆ.ಎಸ್. ಸೋಮಶೇಖರ್ ಆಯ್ಕೆ

ಪೆರ್ಲ: ರಾಜ್ಯ ಸಹಕಾರಿ ಕೃಷಿ ಗ್ರಾಮ ಅಭಿವೃದ್ಧಿ ಬ್ಯಾಂಕ್‌ನ ಡೈರೆ ಕ್ಟರ್ ಆಗಿ ಮಂಜೇಶ್ವರ ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹಾಗೂ ಡಿಸಿಸಿ ಪ್ರಧಾನ ಕಾರ್ಯ ದರ್ಶಿಯಾಗಿರುವ ಜೆ.ಎಸ್. ಸೋಮ ಶೇಖರರನ್ನು ಆಯ್ಕೆ ಮಾಡಲಾಗಿದೆ. ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮ ಅಭಿವೃದ್ಧಿ ಬ್ಯಾಂಕ್‌ಗಳ ಅಪೆಕ್ಸ್ ಸಂಸ್ಥೆಯಾದ ರಾಜ್ಯ ಕೃಷಿ ಗ್ರಾಮ ಅಭಿವೃದ್ಧಿ ಬ್ಯಾಂಕ್ ಆಡಳಿತ ಸಮಿತಿಗೆ ಕಳೆದ ಆಗಸ್ಟ್‌ನಲ್ಲಿ ನಡೆದ ಚುನಾ ವಣೆಯಲ್ಲಿ ೨ ಮತದ ಅಂತರದಲ್ಲಿ ಐಕ್ಯರಂಗದ ಪ್ಯಾನಲ್ ಜಯಗಳಿಸಿತ್ತು. ಬ್ಯಾಂಕ್‌ನ ನಿಯಮಾವಳಿ ಯಂತೆ ೨ ಸದಸ್ಯರನ್ನು ಆಡಳಿತ ಸಮಿತಿಗೆ ಸೂಚಿಸಬ ಹುದಾಗಿದೆ. ಇದರಂತೆ ಜೆ.ಎಸ್. ಸೋಮಶೇಖರ್, ಕೊಡುಂಗಲ್ಲೂರು ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಟಿ.ಎಂ. ನಾಸರ್ ಎಂಬಿವರನ್ನು ಆಯ್ಕೆ ಮಾಡಲು ಇತ್ತೀಚೆಗೆ ನಡೆದ ಆಡಳಿತ ಸಮಿತಿ ಸಭೆ ತೀರ್ಮಾನಿಸಿದೆ.

You cannot copy contents of this page