ಕಾಸರಗೋಡು: ರಜಾ ದಿನಗಳಾದ ಮಾರ್ಚ್ ೨೮, ೨೯, ೩೧ರಂದು ರಾಜ್ಯ ಹಿಂದುಳಿದ ವಿಭಾಗ ಅಭಿವೃದ್ಧಿ ಕಾರ್ಪೊರೇಷನ್‌ನ ಕಾಸರಗೋಡು ಜಿಲ್ಲಾ ಕಚೇರಿ ತೆರೆದು ಕಾರ್ಯಾಚರಿಸಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಒ.ಟಿ.ಎಸ್, ಎಲ್.ಡಿ.ಆರ್.ಎಫ್ ಸೌಲಭ್ಯಕ್ಕೆ ಅರ್ಹತೆಯಿರುವ ಫಲಾನುಭವಿಗಳಿಗೂ, ಇತರ ಫಲಾನುಭವಿಗಳಿಗೂ ಸೌಲಭ್ಯ ನಷ್ಟಗೊಳ್ಳದಂತೆ ಮಾಡಲು ಸೌಕರ್ಯ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
