ರಾಷ್ಟ್ರದ ಧ್ವಜ ಹಾರಾಡಲು ಹುತಾತ್ಮ ಯೋಧರ ಉಸಿರೇ ಕಾರಣ- ಕೊಂಡೆವೂರು, ಕಾರ್ಗಿಲ್ ವಿಜಯ ದಿವಸ್‌ನಲ್ಲಿ ಅಜಿತ್ ಹನುಮಕ್ಕನವರ್
ಉಪ್ಪಳ: ಭಾರತದ ಸಾರ್ವ ಭೌಮತೆ, ಶಾಂತಿ, ಸಮಾಧಾನಗಳು ನೆಲೆಗೊಳ್ಳಲು, ಭಾರತೀಯ ತ್ರಿವರ್ಣ ಧ್ವಜ ಸ್ವಚ್ಛಂದವಾಗಿ ಹಾರಾಡಲು ವೀರ ಹುತಾತ್ಮ ಸೈನಿಕರ ಉಸಿರು ಕಾರಣ ಎಂದು ರಾಷ್ಟಿçÃಯ ಚಿಂತಕ ಅಜಿತ್ ಹನುಮಕ್ಕನವರ್ ಅಭಿಪ್ರಾಯ ಪಟ್ಟರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶನಿವಾರ ನಡೆದ ‘ಕಾರ್ಗಿಲ್ ವಿಜಯ್ ದಿವಸ್’ ಆಚ ರಣೆ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಗೈದು ಅವರು ಮಾತನಾಡಿ ದರು. ಕಾರ್ಗಿಲ್ ಯುದ್ದದ ಮೊದಲ ಹುತಾತ್ಮ ಕ್ಯಾಪ್ಟನ್ ಸೌರಬ್ ಕಾಲಿಯಾ ರನ್ನು ಚಿತ್ರಹಿಂಸೆಗೊಳಪಡಿಸಿದ ಮೃತದೇಹವನ್ನು ಪಾಕಿಸ್ತಾನೀಯರು ಭಾರತಕ್ಕೆ ಹಿಂತಿರುಗಿಸಿದ್ದರು. ಆದರೆ ಭಾರತೀಯ ಸೇನೆ, ಪಾಕಿಸ್ತಾನ ತನ್ನದಲ್ಲವೆಂದು ಹೇಳಿದ್ದ ಸೈನಿಕರ ಮೃತದೇಹÀಗಳನ್ನು ಅಲ್ಲಿಯ ಪತಾಕೆ ಹೊದೆಸಿ ಕಳಿಸಿರುವುದು ಇತಿಹಾಸದಲ್ಲಿ ದಾಖಲಾಗಿದ್ದು, ಭಾರತೀಯ ಮನೋ ಸ್ಥಿತಿಯ, ಸಂಸ್ಕೃತಿಯ ಪ್ರತೀಕ ಎಂದ ವರು ತಿಳಿಸಿದರು. ಭಾರತೀಯ ಸೇನೆ ಜÀಗತ್ತಿನ ಅತ್ಯಂತ ನೈತಿಕ ಸೇನೆ ಎಂ ಬುದು ಹೆಮ್ಮೆಯ ವಿಷಯ ಎಂದವರು ಬೊಟ್ಟುಮಾಡಿದರು. ಮಾತ್ರವಲ್ಲ ಇಂದಿಗೂ ಪ್ರಪಂಚದ ಅನೇಕ ವಿದ್ಯಾಲಯಗಳಲ್ಲಿ ನಮ್ಮ ಸೇನೆಯ ಕುರಿತು ಅಧ್ಯಯನ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಗಿಲ್ ಸಮರದಲ್ಲಿ ಅತ್ಯಂತ ಚಿತ್ರಹಿಂಸೆಗೊಳಗಾಗಿ ಈಗಲೂ ಬದುಕಿರುವ ಗ್ರೆÀನೇಡಿಯರ್ ಜೋಗಿಂದರ್ ಸಿಂಗ್ ಯಾದವ್‌ರ ಸಾಧನೆಯನ್ನು ನೆನಪಿಸಿದರು.
ಸೈನ್ಯ ಗಟ್ಟಿ ಇದ್ದರೆ ನಾವು ಗಟ್ಟಿ. ನಾವುÀ ಗಟ್ಟಿ ಇದ್ದರೆ. ದೇಶ ಗಟ್ಟಿ. ಸಂಸ್ಕೃತಿ, ರಾಷ್ಟç ರಕ್ಷಣೆ ನಮ್ಮ ಆದ್ಯ ಕರ್ತವ್ಯಗಳಾಗಬೇಕೆಂದು ಶ್ರೀಯೋಗಾ ನಂದ ಸರಸ್ವತೀ ಸ್ವಾಮೀಜಿ ಕರೆ ನೀಡಿದರು. ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಿ, ಮಠ-ಮಂದಿರಗಳು ಧಾರ್ಮಿಕ ಪ್ರಜ್ಞೆ ಜೊತೆಗೆ ರಾಷ್ಟç ಭಕ್ತಿ ಉದ್ದೀಪನಗೊಳಿಸುವ ಇಂತಹ ಕಾರ್ಯಕ್ರಮಗಳನ್ನು ಆಯೋ ಜಿಸುವುದು ಸ್ತುತ್ಯರ್ಹ ಎಂದರು.
ಮುಖ್ಯ ಅತಿಥಿಗಳಾಗಿ ಉಪ ಸ್ಥಿತರಿದ್ದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಬ್ರಿಗೇಡಿರ್ ಐ.ಎನ್.ರೈ ಕುಂಬಳೆ, ಕಮಾಂಡರ್ ವಿಜಯ ಕುಮಾರ್ ಕಣ್ವತೀರ್ಥ, ಉದ್ಯಮಿ ಸುಕೇಶ್ ಹೆಗ್ಡೆ ಬೆಂಗಳೂರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಗಿಲ್ ವಿಜಯ ಮತ್ತು ರಾಷ್ಟç ರಕ್ಷಣೆಯಲ್ಲಿ ಸೈನ್ಯದ ಸಾಧನೆಗಳ ಬಗ್ಗೆ ಮಾತನಾಡಿದರು.
98ರ ಹರೆಯದ ಯೋಧ ಪಿ.ಕೆ.ಎನ್.ಪಿಳ್ಳೆ, ಆಶ್ರಮದ ಟ್ರಸ್ಟಿಗಳಾದ ಮೋನಪ್ಪ ಭಂಡಾರಿ ಮಂಗಳೂರು, ಶಶಿಧರ ಶೆಟ್ಟಿ ಗ್ರಾಮಚಾವಡಿ ಉಪಸ್ಥಿತರಿದ್ದರು.
ಈ ಸಂದ¨ssÀð ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ವೀರ ಯೋಧ ಹವಾಲ್ದಾರ್ ಜೋನಿ ಮ್ಯಾಥ್ಯೂ ರಾಜಪುರಂರನ್ನು, ಸೈನ್ಯದಲ್ಲಿ ಈಗ ಸೇವೆ ಸಲ್ಲಿಸುತ್ತಿರುವ ಕೊಂಡೆವೂರಲ್ಲಿ ಶಿಕ್ಷಣ ಪಡೆದ ಸೈನಿಕರ ಮಾತಾಪಿತರನ್ನು ಗೌರವಿಸಲಾಯಿತು. ಅಶೋಕ ಮಾಸ್ತರ್ ಬಾಡೂರು ಸ್ವಾಗತಿಸಿ, ವಕೀಲ ಗಂಗಾಧರ ಕೊಂಡೆವೂರು ವಂದಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು. ಗಣ್ಯರು ಹಾಗೂ ಶ್ರೀಗಳು ‘ಅಮರ್ ಜವಾನ್’ ಜ್ಯೋತಿ ಬೆಳಗಿ ಪುಷ್ಪಾರ್ಚನೆಗೈದರು. ಬಳಿಕ ಕೊಂಡೆವೂರು ಸದ್ಗುರುಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿ ಗಳಿಂದ ಯೋಧರನ್ನು ಸ್ಮರಿಸುವ, ಕಾರ್ಗಿಲ್ ಗೆಲುವು ಆಧಾರಿತ ನೃತ್ಯ ರೂಪಕ ಗಮನ ಸೆಳೆಯಿತು.