ರಾಷ್ಟ್ರೀಯ ಕ್ರೀಡಾಕೂಟ: ಕಬಡ್ಡಿ ತೀರ್ಪುಗಾರನಾಗಿ ದೀಕ್ಷಿತ್ ಮುಳ್ಳೇರಿಯ ಆಯ್ಕೆ
ಮುಳ್ಳೇರಿಯ: ಗೋವಾದಲ್ಲಿ ಅಕ್ಟೋಬರ್ ೨೬ರಿಂದ ನವಂಬರ್ ೯ರ ವರೆಗೆ ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಕಬಡ್ಡಿ ಪಂದ್ಯಾಟ ತೀರ್ಪುಗಾರರಾಗಿ ನೇಶನಲ್ ರೆಫರಿಯಾಗಿರುವ ದೀಕ್ಷಿತ್ ಮುಳ್ಳೇರಿಯ ಆಯ್ಕೆಗೊಂಡಿದ್ದಾರೆ. ಕೇರಳ ರಾಜ್ಯ ಮಾಜಿ ಕಬಡ್ಡಿ ಆಟಗಾರನೂ ಆಗಿರುವ ದೀಕ್ಷಿತ್ ಕಳೆದ ತಿಂಗಳು ದುಬಾಯಲ್ಲಿ ದುಬಾ ಪೊಲೀಸ್, ದುಬಾ ಸ್ಪೋರ್ಟ್ಸ್ ಕೌನ್ಸಿಲ್, ಯುಎಇ ಕಬಡ್ಡಿ ಆರ್ಗನೈಸೇಶನ್ ಎಂಬಿವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಐದನೇ ಲೇಬರ್ ಸ್ಪೋರ್ಟ್ಸ್ ಕಬಡ್ಡಿ ಟೂರ್ನಮೆಂಟ್‌ನ ರೆಫರಿಯಾಗಿದ್ದರು. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಬೆಂಗಳೂರಿನಲ್ಲಿ ನಡೆಸಿದ ಕಬಡ್ಡಿ ಎನ್‌ಐಎಸ್ ಸರ್ಟಿಫಿಕೇಶನ್ ಕೋರ್ಸ್ ಉತ್ತೀರ್ಣನಾಗಿ ಉತ್ತಮ ಸಾಧನೆ ಮಾಡಿದ್ದರು. ದೀಕ್ಷಿತ್ ಮುಳ್ಳೇರಿಯ ಬಳಿಯ ಕಾನಕ್ಕೋಡು ದೊಡ್ಡ ಮನೆಯ ದಾಮೋದರನ್ ಮಣಿಯಾಣಿ-ಶಾರದಾ ದಂಪತಿಯ ಪುತ್ರನಾಗಿದ್ದಾರೆ