ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ವಿವಿಧ ಬೇಡಿಕೆಗಳೊಂದಿಗೆ ಉಣ್ಣಿತ್ತಾನ್‌ರಿಂದ ಕೇಂದ್ರ ಸಚಿವರ ಭೇಟಿ

ಕಾಸರಗೋಡು: ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಸಂದರ್ಶಿಸುವುದಾಗಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದರು. ಚುನಾವಣೆ ಸಮಯದಲ್ಲಿ ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿನ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ಹಲವರು ಸಮಸ್ಯೆಗಳು, ದೂರುಗಳು ಲಭಿಸಿದ್ದು, ಇದನ್ನೆಲ್ಲಾ ಕ್ರೋಢೀಕರಿಸಿ ಸಚಿವರಿಗೆ ತಿಳಿಸಿರುವುದಾಗಿ ಸಂಸದರು ನುಡಿದರು.

ಮಂಜೇಶ್ವರ, ಕಾಸರಗೋಡು, ಚೆರ್ಕಳ, ಕಾಞಂಗಾಡ್, ಪಡನ್ನಕ್ಕಾಡ್, ನೀಲೇಶ್ವರ, ಪಯ್ಯನ್ನೂರು, ಪಿಲಾತ್ತರ, ಕಲ್ಯಾಶ್ಶೇರಿ ಮೊದಲಾದ ಪ್ರದೇಶಗಳ ಜನರ ಬೇಡಿಕೆ ಹಾಗೂ ಆಗ್ರಹಗಳನ್ನು ಸಚಿವರಿಗೆ ಲಿಖಿತವಾಗಿ ನೀಡಿರುವುದಾಗಿ ಸಂಸದರು ತಿಳಿಸಿದ್ದಾರೆ. ಈ ವೇಳೆ ಜನರ ಬೇಡಿಕೆಗಳನ್ನು ಗಮನದಲ್ಲಿರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿರುವುದಾಗಿ ಸಂಸದರು ತಿಳಿಸಿದ್ದಾರೆ.

You cannot copy contents of this page