ರಾಷ್ಟ್ರೀಯ ಹೆದ್ದಾರಿ: ಜಿಲ್ಲೆಯಲ್ಲಿ 56 ಅಪಘಾತ ಸಾಧ್ಯತೆ ಪ್ರದೇಶಗಳು: ಮಳೆಗಾಲ ಆರಂಭಗೊಳ್ಳುವ ಮೊದಲೇ ಅಗತ್ಯದ ಕ್ರಮಕ್ಕೆ ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಜಿಲ್ಲೆಯ ರಾಷ್ಟ್ರೀಯಲ್ಲಿ 56 ಕೇಂದ್ರಗಳು ಅನಾಹುತ ಸಾಧ್ಯತೆಗಳಿರುವ ಪ್ರದೇಶಗಳಾಗಿವೆಯೆಂದು ಜಿಲ್ಲಾಧಿಕಾರಿ ನಿಯೋಜಿಸಿದ ತಜ್ಞರ ಸಮಿತಿ ತನ್ನ ವರದಿಯಲ್ಲಿ ಸೂಚಿಸಿದೆ.

ಇದೇ ಸಂದರ್ಭದಲ್ಲಿ ಇಂತಹ ಅನಾಹುತ ನಡೆಯಲು ಸಾಧ್ಯತೆ ಇರುವ ಸ್ಥಳಗಳಲ್ಲಿ ಮಳೆಗಾಲ ಆರಂಭವಾಗುವ ಮೊದಲೇ ಅಗತ್ಯದ  ಕ್ರಮ  ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಇಂಭಶೇಖರ್ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶ ನೀಡಿದ್ದಾರೆ. ಭೂ ಕುಸಿತ ಹಾಗೂ ನೆರೆ  ಸಾಧ್ಯತೆ  ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕೆಂದೂ ಅವರು ನಿರ್ದೇಶ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಪತ್ತು  ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಎಲ್ಲದರ ಮೇಲೆ ಸದಾ ನಿಗಾ ಇರಿಸಲಾಗುವುದೆಂದೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಲೆಕ್ಟರೇಟ್‌ನಲ್ಲಿ ನಿನ್ನೆ ನಡೆದ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ ಸಭೆಯಲ್ಲಿ ಜಿಲ್ಲಾಧಿಕಾರಿ ಈ ನಿರ್ದೇಶ ನೀಡಿದ್ದಾರೆ.

You cannot copy contents of this page