ರಾಷ್ಟ್ರೀಯ ಹೆದ್ದಾರಿ ದುರಂತ : ವಿವಿಧ ಅಧಿಕಾರಿಗಳ ಸಭೆ ಇಂದು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಮಳೆಗಾಲದ ಪೂರ್ವಭಾವಿಯಾಗಿ ದುರಿತ ಸಾಧ್ಯತೆಯನ್ನು ಹೊರತು ಪಡಿಸಲು   ತುರ್ತು ಕ್ರಮ ಕೈಗೊಳ್ಳುತ್ತಿರುವುದಾಗಿ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ತಿಳಿಸಿದ್ದಾರೆ. ಮಟ್ಟಲಾಯಿಕುನ್ನ್, ವೀರಮಲಕುನ್ನ್, ಚೆರ್ಕಳ ಎಂಬೆಡೆಗಳಲ್ಲಿ ಪಾರ್ಶ್ವ ಭಿತ್ತಿ ಸಂರಕ್ಷಣೆ ಖಚಿತಪಡಿಸಲು, ಗುಡ್ಡೆ ಕುಸಿತಗಳನ್ನು ತಡೆಯುವುದಕ್ಕಾಗಿ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ, ನಿರ್ಮಾಣ ಕಂಪೆನಿಗಳಿಗೂ ಈಗಾಗಲೇ ನಿರ್ದೇಶ ಲಿಖಿತವಾಗಿ ನೀಡಲಾಗಿದೆಯೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವಿಕೋಪ ಸಾಧ್ಯತೆ ಅಧ್ಯಯನ ನಡೆಸಲು ರಾಜ್ಯ ವಿಕೋಪ ನಿವಾರಣೆ ಪ್ರಾಧಿಕಾರದೊಂದಿಗೆ ಆಗ್ರಹಿಸಲಾಗಿದೆ. ಮಟ್ಟಲಾಯಿ, ವೀರಮಲದಲ್ಲ್ಲಿ ನಡೆಸುವ ಕೆಲಸಗಳ ಬಗ್ಗೆ ನಿರ್ಮಾಣ ಕಂಪೆನಿಯಾದ ಮೇಘದಿಂದ  ಹಾಗೂ ಜಿಲ್ಲಾಡಳಿತದಿಂದ ಲಭಿಸಿದ ಸಮಗ್ರ ವರದಿಯನ್ನು ಮುಂದಿನ ಕ್ರಮಗಳಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗಿದೆ. ಇದರ ಹೊರತಾಗಿ ಜಿಲ್ಲಾಧಿಕಾರಿ ನೇಮಕಗೊಳಿಸಿದ ಡೆಪ್ಯುಟಿ ಕಲೆಕ್ಟರ್ ಎಲ್‌ಎಯವರ ನೇತೃತ್ವದಲ್ಲಿರುವ ತಜ್ಞ ತಂಡ ರಾಷ್ಟ್ರೀಯ ಹೆದ್ದಾರಿಯ ವಿವಿಧ ಭಾಗಗಳಲ್ಲಿ ಸಮಗ್ರ ತಪಾಸಣೆ ನಡೆಸಿದೆ. ಈ ಬಗ್ಗೆ ಸಮಗ್ರ ಚರ್ಚೆ ಇಂದು ಅಪರಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. 

You cannot copy contents of this page