ರಾಷ್ಟ್ರೀಯ ಹೆದ್ದಾರಿ ಮೊಗ್ರಾಲ್ ಪೇಟೆಯಲ್ಲಿ  ಪಾದಚಾರಿಗಳಿಗೆ ನಡೆದು ಹೋಗಲು ದಾರಿಯಿಲ್ಲ: ಹೆಚ್ಚಿದ ಸಮಸ್ಯೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಕಂಡುಬಂದ ಲೋಪದೋಷಗಳನ್ನು ತಿಳಿಸುವಾಗ  ಮೌನ ವಹಿಸುವ ಅಧಿಕಾರಿಗಳ ನಿಲುವಿನಿಂದಾಗಿ ಮೊಗ್ರಾಲ್‌ನಲ್ಲಿ ಪಾದಚಾರಿಗಳಿಗೆ  ಸಮಸ್ಯೆ ಇನ್ನಷ್ಟು ಹೆಚ್ಚಿದೆ. ಮೊದಲು ಮಾಡಬೇಕಾದ ಕಾಮಗಾರಿಗಳನ್ನು ಕೊನೆಗೆ ನಡೆಸುವ ಕ್ರಮದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ಭಾರೀ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಚರಂಡಿ ಹಾಗೂ ಕಾಲ್ನಡೆ  ದಾರಿಯ ಅಭಾವದಿಂದಾಗಿ ಹಲವು ಕಡೆಗಳಲ್ಲಿ ಜನರಿಗೆ ನಡೆದಾಡಲು ಸಮಸ್ಯೆ ಎದುರಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಸಮೀಪ ಪ್ರದೇಶಗಳು ತೀವ್ರ ಮಳೆಗೆ  ಜಲಾವೃತವಾಗುತ್ತಿವೆ.  ಮೊಗ್ರಾಲ್ ಲೀಗ್ ಕಚೇರಿಯಿಂದ ಮುಹಿಯುದ್ದೀನ್ ಜುಮಾ ಮಸೀದಿ ವರೆಗಿನ ೫೦೦ ಮೀಟರ್ ದೂರದಲ್ಲಿ ಇದುವರೆಗೂ ಸರ್ವೀಸ್ ರಸ್ತೆ ಸಮೀಪ ಕಾಲ್ನಡೆ ದಾರಿ ಕಾಮಗಾರಿ ಪೂರ್ತಿಗೊಂಡಿಲ್ಲ. ಇದೀಗ ಶಾಲೆಗಳು ಆರಂಭಗೊಂಡಿ ರುವುದರಿಂದ ಮೊಗ್ರಾಲ್ ಪೇಟೆಯಲ್ಲ್ಲಿ ಕಾಲ್ನಡೆ ದಾರಿ ಇಲ್ಲದಿರುವುದು ವಿದ್ಯಾರ್ಥಿಗಳಿಗೆ ನಡೆದು ಹೋಗಲು ಸಮಸ್ಯೆ ಎದುರಾಗುತ್ತಿದೆ. ಇವರು ಶಾಲೆಗೆ ತಲುಪಬೇಕಾದರೆ ಸರ್ವೀಸ್ ರಸ್ತೆ ಮೂಲಕವೇ ನಡೆದು ಹೋಗಬೇಕಾದ ಸ್ಥಿತಿ ಉಂಟಾಗಿದೆ.  ಅತೀ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಯಲ್ಲಿ  ಮಕ್ಕಳು ನಡೆದುಹೋಗಬೇಕಾಗಿ ಬರುವು ದರಿಂದ ರಕ್ಷಕರು ಆತಂಕಗೊಂಡಿದ್ದಾರೆ.

ಜನರಿಗೆ ನಡೆದು ಹೋಗಲಿರುವ ಹಕ್ಕನ್ನು ನಿಷೇಧಿಸಕೂಡದೆಂದು ಹೈಕೋರ್ಟ್ ಕಳೆದ ವರ್ಷ ನಿರ್ಮಾಣ ಕಂಪೆನಿ ಅಧಿಕಾರಿಗಳಿಗೆ ನಿರ್ದೇಶ ನೀಡಿತ್ತು. ಹಾಗಿದ್ದರೂ ಕಾಲ್ನಡೆ ದಾರಿ ವಿಷಯದಲ್ಲಿ ಅಧಿಕಾರಿಗಳು  ನಿರ್ಲಕ್ಷ್ಯ ನಿಲುವು ತಾಳುತ್ತಿದ್ದಾರೆ.  ಮೊಗ್ರಾಲ್ ಪೇಟೆಯಲ್ಲಿ ಕಾಲ್ನಡೆ ದಾರಿ ನಿರ್ಮಾಣ ಆರಂಭಿಸಲೇ ಇಲ್ಲ. ನಿರ್ಮಾಣ ಆರಂಭಗೊಂಡ ಸ್ಥಳದಲ್ಲಿ ಅರ್ಧದಲ್ಲೇ ಉಳಿದುಕೊಂಡಿದೆ. ಹಲವೆಡೆಗಳಲ್ಲಿ  ಕಾಲ್ನಡೆ ದಾರಿಗೆ ಅಗತ್ಯದ ಸ್ಥಳ ಸೌಕರ್ಯ ಇಲ್ಲದಾಗಿದೆ.

ಈ ಸ್ಥಳಗಳಲ್ಲಿ  ನಾಮಮಾತ್ರ ಕಾಮಗಾರಿ ನಡೆಸಲಾಗುತ್ತಿದೆಯೆಂಬ ಆರೋಪ ಉಂಟಾಗಿದೆ. ಕಳೆದ ವರ್ಷ ಸ್ವಯಂ ಸೇವಾ ಸಂಘಟನಾ ಕಾರ್ಯಕರ್ತರು ನಿರ್ಮಾಣ ಕಂಪೆನಿ ಅಧಿಕಾರಿಗಳಿಗೆ ನೀಡಿದ ದೂರು, ಮನವಿಗಳನ್ನು ಸರಿಯಾದ ರೀತಿಯಲ್ಲಿ ಪರಿಗಣಿಸದಿರುವುದೇ ಈಗ ಕಾಲ್ನಡೆ ದಾರಿ ಹಾಗೂ ಚರಂಡಿ ಸಮಸ್ಯೆಗೆ ಕಾರಣವಾಗಿದೆ. ಈ ಕಾಮಗಾರಿಗಳನ್ನು ಸಮರೋ ಪಾದಿಯಲ್ಲಿ ಪೂರ್ತಿ ಗೊಳಿಸ ಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

You cannot copy contents of this page