ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಇಂದು ಕಾಸರಗೋಡಿನಲ್ಲಿ
ಕಾಸರಗೋಡು: ಭಾರತ್ ಪರ್ಯೋಜನ್ ಮೂಲಕ ಒಳಪಡಿಸಿ ಕೇಂದ್ರ ಸರಕಾರ ರಾಜ್ಯದಲ್ಲಿ ನಿರ್ಮಾಣ ಕೆಲಸ ಆರಂಭಿಸಿದ ಹಾಗೂ ಪೂರ್ತೀ ಕರಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯನ್ನು ಇಂದು ಅಪರಾಹ್ನ ೩.೩೦ಕ್ಕೆ ಕಾಸರ ಗೋಡು ತಾಳಿಪಡ್ಪು ನಗರಸಭಾ ಮೈದಾ ನದಲ್ಲಿ ನಡೆಯುವ ಕಾರ್ಯಕ್ರದಲ್ಲಿ ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ನಿರ್ವಹಿಸುವರು.
ಕೇಂದ್ರ ಸಚಿವರುಗಳಾದ ಡಾ. ವಿ.ಕೆ. ಸಿಂಗ್, ವಿ. ಮುರಳೀಧರನ್, ರಾಜ್ಯ ಲೋಕೋಪಯೋಗಿ ಖಾತೆ ಸಚಿವ ಪಿ.ಎ. ಮೊಹಮ್ಮದ್ ರಿಯಾ ಸ್, ಸಂಸದ ರಾಜ್ಮೋಹನ್ ಉಣ್ಣಿ ತ್ತಾನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿ ಸುವರು. ಕಾಸರಗೋಡಿನ ಹೊರತಾಗಿ ಮೂನ್ನಾರಿನಲ್ಲಿ ನಡೆಯುವ ಇದೇ ರೀತಿಯ ಉದ್ಘಾಟನಾ ಕಾರ್ಯಕ್ರಮ ವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿಕ ಕಾಸರಗೋಡಿನಿಂದಲೇ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸುವರು. ೨೦೨೩ ಜುಲೈ ೨೦ರಂದು ಸಾರಿಗೆಗಾಗಿ ತೆರೆದುಕೊಡಲಾ ಗಿರುವ ನೀಲೇಶ್ವರ-ಪಳ್ಳಿಕ್ಕೆರೆ ಮೇಲ್ಸೇತುವೆಯ ಔಪಚಾರಿಕ ಉದ್ಘಾಟನೆಯನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ನೆರವೇರಿಸುವರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇತೃತ್ವದಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಈಗ ನಡೆಯುತ್ತಿವೆ.
ಈ ಯೋಜನೆಯಂತೆ ತಲಪ್ಪಾಡಿ ಯಿಂದ ಆರಂಭಗೊಂಡು ಚೆಂಗಳ ತನಕದ ೩೯ ಕಿಲೋ ಮೀಟರ್ನಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋ ಜನೆ ನಿರ್ಮಾಣ ಕೆಲಸದ ಗುತ್ತಿಗೆಯನ್ನು ಊರಾಳುಂಗಲ್ ಸೊಸೈಟಿ ವಹಿಸಿ ನಡೆ ಸುತ್ತಿದೆ. ಇದು ೧೭೦೪ ಕೋಟಿ ರೂ.ಗಳ ಯೋಜನೆ ಯಾಗಿದೆ. ಇದರಲ್ಲಿ ಕಾಸರಗೋಡು ಕರಂದಕ್ಕಾಡ್ನಿಂದ ನುಳ್ಳಿಪ್ಪಾಡಿ ತನಕ ಪ್ಲೈ ಓವರ್ ನಿರ್ಮಾಣ ಕೆಲಸಗಳು ಒಳಗೊಂಡಿದೆ. ಆದರೆ ಇದರ ನಿರ್ಮಾಣ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಇದರ ಹೊರತಾಗಿ ಕುಂಬಳೆ, ಮೊಗ್ರಾಲ್, ಶಿರಿಯ ಮತ್ತು ಉಪ್ಪಳದಲ್ಲಿ ಸೇತುವೆ ಗಳನ್ನೂ ನಿರ್ಮಿಸಲಾಗುತ್ತಿದೆ. ಮಾತ್ರ ವಲ್ಲ ವಿವಿಧೆಡೆಲ್ಲಾಗಿ ಒಟ್ಟು ೧೭ ಅಂ ಡರ್ ಪ್ಯಾಸೇಜ್ ನಿರ್ಮಿಸಲಾಗುತ್ತ್ತಿದೆ. ಇದರಲ್ಲಿ ಹಲವು ಅಂಡರ್ ಪ್ಯಾಸೇಜ್ ಗಳ ನಿರ್ಮಾಣ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಮೇಲ್ಸೇತುವೆಗಳ ನಿರ್ಮಾಣ ಕೆಲಸ ಶೇ. ೭೫ರಿಂದ ೯೫ರ ತನಕ ಪೂರ್ಣ ಗೊಂಡಿದೆ. ಅಂಡರ್ ಪ್ಯಾಸೇಜ್ಗಳ ಪೈಕಿ ೧೭ ಪ್ಯಾಸೇಜ್ ಗಳನ್ನು ಸಾರಿಗೆ ಸೌಕರ್ಯಕ್ಕಾಗಿ ಈಗಾಗಲೇ ತೆರೆದುಕೊಡಲಾಗಿದೆ. ತಲಪ್ಪಾಡಿಯಿಂದ ಚೆಂಗಳ ತನಕದ ಒಂದನೇ ರೀಚ್ನ ನಿರ್ಮಾಣ ಕೆಲಸ ಶೇ. ೬೨.೩ರಷ್ಟು ಈಗ ಪೂರ್ಣ ಗೊಂಡಿದೆ. ಚೆಂಗಳ-ನೀಲೇಶ್ವರ ತನಕ ಶೇ. ೪೮ ಮತ್ತು ನೀಲೇಶ್ವರ-ತಳಿಪರಂಬ ತನಕದ ನಿರ್ಮಾಣ ಕೆಲಸ ಶೇ. ೪೪ರಷ್ಟು ಮಾತ್ರವೇ ಈಗ ಪೂರ್ಣಗೊಂಡಿದೆ. ಕರಾರು ಪ್ರಕಾರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳ ನಿರ್ಮಾಣ ಕೆಲಸಗಳನ್ನು ೨೦೨೪ ಮಾರ್ಚ್ ೩೧ರೊಳಗಾಗಿ ಪೂರ್ಣ ಗೊಳಿಸಬೇಕಾಗಿದೆಯಾದರೂ, ಆ ಬಳಿಕ ಸಮಯವನ್ನು ೨೦೨೫ ಮಾರ್ಚ್ ೩೧ರ ತನಕ ವಿಸ್ತರಿಸಲಾಗಿದೆ. ಅಂದರೆ ಇವುಗಳ ನಿರ್ಮಾಣ ಕೆಲಸವನ್ನು ಪೂರ್ಣಗೊಳಿಸಲು ಇನ್ನೂ ಒಂದೂಕಾಲು ವರ್ಷ ಮಾತ್ರವೇ ಬಾಕಿ ಉಳಿದುಕೊಂಡಿದೆ. ಅದರೊಳಗೆ ಇದು ಪೂರ್ಣಗೊಳ್ಳ ಬಹುದೇ ಎಂಬುವುದನ್ನು ಇನ್ನಷ್ಟೇ ಕಾದು ನಿಂತು ನೋಡಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಚಚುಷ್ಪಥವಾಗಿ ಅಭಿವೃದ್ಧಿಗೊಳಿ ಸಲಾಗುತ್ತಿದೆ.