ರಾಸಾಯನಿಕ ಸಾಮಗ್ರಿ ಸಾಗಿಸುತ್ತಿದ್ದ ಲಾರಿ ಬೈಕ್‌ಗೆ ಢಿಕ್ಕಿ: ಬೆಂಕಿ ತಗಲಿ ಬೈಕ್ ಸವಾರ ಸಾವು
ತೃಶೂರು: ಇಲ್ಲಿಗೆ ಸಮೀಪದ ಚಾಲಕ್ಕುಡಿ ಪೊಟ್ಟಾ ಆಶ್ರಮ ಸಿಗ್ನಲ್ ಬಳಿ ರಾಸಾಯನಿಕ ಸಾಮಗ್ರಿಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದು ಬೆಂಕಿಎದ್ದ ಪರಿಣಾಮ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 7.30ರ ವೇಳೆಗೆ ನಡೆದಿದೆ. ಚಾಲಕ್ಕುಡಿ ವಿ.ಆರ್.ಪುರಂ ಞರಕ್ಕಲ್ ಅಶೋಕನ್ ಎಂಬವರ ಪುತ್ರ ಅನೀಶ್ (40) ಸಾವನ್ನಪ್ಪಿದ ದುರ್ದೈವಿ ಯುವಕ.
ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದಿದ್ದು ತಕ್ಷಣ ಲಾರಿಯಲ್ಲಿ ಬೆಂಕಿ ಎದ್ದಿದೆ. ಇದರಿಂದಾಗಿ ಅದು ರಕ್ಷಣಾ ಕಾರ್ಯಾಚರಣೆ ವಿಳಂಬಗೊಳ್ಳು ವಂತೆಯೂ ಮಾಡಿದೆ. ಲಾರಿ ಸಂಪೂರ್ಣ ವಾಗಿ ಬೆಂಕಿಗಾಹುತಿಯಾಗಿದೆ. ಢಿಕ್ಕಿ ಹೊಡೆದ ಈ ಲಾರಿ ಬೈಕ್ ಸವಾರ ಅನೀಶ್‌ನ ದೇಹದ ಮೇಲೆ ಹರಿದಿದೆ. ಅದರಿಂದಾಗಿ ಅನೀಶ್‌ನ ದೇಹಕ್ಕೂ ಬೆಂಕಿ ತಗಲಿದ್ದು, ಅವರು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.