ರಿಪೋ ದರ 0.25 ಶೇಕಡಾ ಕಡಿತ
ದೆಹಲಿ: ಐದು ವರ್ಷದ ಬಳಿಕ ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ದರ ಕಡಿತ ಮಾಡಿದೆ. ಇದರೊಂದಿಗೆ ರಿಪೋ ದರ 6.25 ಶೇಕಡಾವಾಗಿದೆ. ಕೇಂದ್ರ ರೆವೆನ್ಯೂ ಕಾರ್ಯದರ್ಶಿಯಾಗಿದ್ದ ಸಂಜಯ್ ಮಲ್ಹೋತ್ರಾ ಆರ್‌ಬಿಐ ಗವರ್ನರ್ ಆಗಿ ಹೊಣೆ ವಹಿಸಿಕೊಂಡ ಬಳಿಕದ ಮೊದಲ ಹಣ ನೀತಿ ಸಭೆಯಲ್ಲಿ ದರ ಕಡಿಮೆ ಮಾಡಲು ತೀರ್ಮಾನಿಸಲಾ ಗಿದೆ. ಆರು ಮಂದಿಯ ಸಮಿತಿ ಸಭೆಯಲ್ಲಿ ಗವರ್ನರ್ ಸಹಿತ ಐದು ಮಂದಿಯೂ ಹೊಸ ಸದಸ್ಯರಾಗಿದ್ದಾರೆ.