ರಿಫಾಯಿ ದಫ್‌ರಾತಿಬ್ ವಾರ್ಷಿಕ, ಧಾರ್ಮಿಕ ಪ್ರವಚನ ನಾಳೆಯಿಂದ

ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಸಿರಾಜುಲ್ ಮುನೀರ್ ದಫ್ ಸಮಿತಿಯ ಆಶ್ರಯದಲ್ಲಿ ರಿಫಾಯಿ ದಫ್ ರಾತೀಬ್ ಹಾಗೂ ೨೮ನೇ ವಾರ್ಷಿಕ, ನಾಲ್ಕು ದಿನದ ಧಾರ್ಮಿಕ ಪ್ರವಚನ ನಾಳೆಯಿಂದ ೨೮ರ ವರೆಗೆ ಸಕರಿಯ ಜುಮಾ ಮಸೀದಿ ಅಂಗಣದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾಳೆ ಸಂಜೆ ೪ ಗಂಟೆಗೆ ಮಸೀದಿಯ ಮಾಜಿ ಅಧ್ಯಕ್ಷ ಮಹಮ್ಮೂದ್ ಹಾಜಿ ಪಚ್ಚಂಬಳ ಧ್ವಜಾರೋಹಣಗೈಯ್ಯುವರು. ರಾತ್ರಿ ೮ ಗಂಟೆಗೆ ಕೆ.ಎಸ್. ಶಮೀಂ ತಂಙಳ್ ಕುಂಬೋಳ್ ಧಾರ್ಮಿಕ ಪ್ರವಚನ ಉದ್ಘಾಟಿಸುವರು. ಅಧ್ಯಕ್ಷ ಮಜೀದ್ ಪಚ್ಚಂಬಳ ಅಧ್ಯಕ್ಷತೆ ವಹಿಸುವರು. ಅಬ್ದುಲ್ ವಹಾಬ್ ನಯಿಮಿ ಕೊಲ್ಲಂ ಪ್ರಧಾನ ಭಾಷಣ ನಡೆಸುವರು. ೨೬ರಂದು ರಾತ್ರಿ ೮ ಗಂಟೆಗೆ ಮಜೀದ್ ಬಾಕವಿ ಕೊಡುವಳ್ಳಿ ಪ್ರಧಾನ ಭಾಷಣ ನಡೆಸುವರು. ೨೭ರಂದು ಸಂಜೆ ೬ ಗಂಟೆಗೆ ಮಜ್ಲಿಸ್‌ಗೆ ಅಬ್ದುಲ್ ಲತೀಫ್ ಸಖಾಫಿ ಕಾಂತಾಪುರ ನೇತೃತ್ವ ನೀಡುವರು. ೨೮ರಂದು ರಾತ್ರಿ ೮ ಗಂಟೆಗೆ ಹಂಸ ಮಿಸ್ಬಾಹಿ ಓಟೆಪದವು ಪ್ರಧಾನ ಭಾಷಣ ನಡೆಸುವರು. ಹಲವರು ಮಾತನಾಡುವರು.

You cannot copy contents of this page