ರಿಯಾಸ್ ಮೌಲವಿ ಕೊಲೆ ಪ್ರಕರಣದ ವಿಚಾರಣೆ ಪೂರ್ಣ: ಈ ತಿಂಗಳಲ್ಲೇ ತೀರ್ಪು ಸಾಧ್ಯತೆ
ಕಾಸರಗೋಡು: ಕಾಸರಗೋಡು ನಗರದ ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೩೦)ರನ್ನು ಕೊಲೆಗೈದ ಪ್ರಕರಣದ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದೆ.
ಇದರಿಂದಾಗಿ ಈ ಪ್ರಕರಣದ ತೀರ್ಪು ಬಹುತೇಕ ಈ ತಿಂಗಳೊಳ ಗಾಗಿ ಹೊರಬರುವ ಸಾಧ್ಯತೆ ಇದೆ. ಕಾಸರಗೋಡು ಕೇಳುಗುಡ್ಡೆ ಅಯ್ಯಪ್ಪ ನಗರದ ಅಜೀಶ್ ಅಲಿಯಾಸ್ ಅಪ್ಪು (೨೬), ಕೇಳುಗುಡ್ಡೆಯ ನಿತಿನ್ (೨೫) ಮತ್ತು ಕೇಳುಗುಡ್ಡೆಯ ಅಖಿಲೇಶ್ (೩೦) ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಕೊಲೆ ನಡೆದ ಕೆಲವೇ ದಿನಗಳೊಳಗಾಗಿ ಈ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅವರು ಅಂದಿನಿಂದ ಇಂದಿನತನಕ ಜಾಮೀನು ಕೂಡಾ ಲಭಿಸದೆ ಕಳೆದ ಆರು ವರ್ಷಗಳಿಂದ ಕಣ್ಣೂರು ಸೆಂಟ್ರಲ್ ಜೈಲಿನಲ್ಲೇ ನ್ಯಾಯಾಂಗ ಬಂಧನದಲ್ಲೇ ಕಳೆಯುತ್ತಿದ್ದಾರೆ.
೨೦೧೭ ಮಾರ್ಚ್ ೨೧ರಂದು ರಿಯಾಸ್ ಮೌಲವಿಯವರನ್ನು ಹಳೇ ಸೂರ್ಲಿನಲ್ಲಿ ಅವರು ವಾಸಿಸುತ್ತಿರು ವ ಕೊಠಡಿಯೊಳಗೇ ಇರಿದು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು. ಅಂದು ಕಣ್ಣೂರು ಕ್ರೈಮ್ ಬ್ರಾಂಚ್ ಮುಖ್ಯಸ್ಥರಾಗಿದ್ದ ಡಾ. ಶ್ರೀನಿವಾಸ ಮತ್ತು ಕಾಸರಗೋಡು ಡಿವೈಎಸ್‌ಪಿ ಪಿ.ಕೆ. ಸುಧಾಕರನ್‌ರ ನೇತೃತ್ವದ ವಿಶೇಷ ಪೊಲೀಸರ ತಂಡ ಈ ಕೊಲೆ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿತ್ತು. ಆರೋಪಿಗಳು ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೊಳಗಾದ ೯೦ ದಿನಗಳ ಒಳಗಾಗಿಯೇ ಪೊಲೀಸರು ಈ ಕೊಲೆ ಪ್ರಕರಣದ ಚಾರ್ಜ್ ಶೀಟನ್ನು ನ್ಯಾಯಾಲ ಯಕ್ಕೆ ಸಲ್ಲಿಸಿದ್ದರು. ಅದರಿಂದಾಗಿ ಆರೋಪಿ ಗಳಿಗೆ ಜಾಮೀನು ಲಭಿಸದಂತಾ ಯಿತು. ಜಾಮೀನು ಕೋರಿ ಆರೋಪಿಗಳು ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ಅದನ್ನು ತಿರಸ್ಕರಿಸಿ ಜಾಮೀನು ನಿರಾಕರಿಸಿತ್ತು. ಅದರಿಂದಾಗಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಉಳಿದುಕೊಂಡೇ ವಿಚಾರಣೆ ಎದುರಿಸಬೇಕಾಗಿ ಬಂದಿದೆ.