ರಿಸರ್ವ್ ಬ್ಯಾಂಕ್‌ಗೆ ಬಾಂಬ್ ಬೆದರಿಕೆ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ)ಯನ್ನು ಸ್ಫೋ ಟಿಸುವುದಾಗಿ ಇಮೈಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿ ಕೊಡಲಾಗಿದೆ.
ಮುಂಬೈಯ ಮಾತಾ ರಮಾಭಾಯಿ ಮಾರ್ಗದಲ್ಲಿ ಆರ್‌ಬಿಐ ನೆಲೆಗೊಂಡಿದ್ದು, ಬಾಂಬ್ ಸ್ಫೋಟ ಬೆದರಿಕೆ ಬಗ್ಗೆ ಲಭಿಸಿದ ದೂರಿನಂತೆ ಮಾತಾ ರಮಾಭಾಯಿ ಮಾರ್ಗ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ಕಳೆದ ತಿಂಗಳು ಕೂಡಾ ಆರ್‌ಬಿಐಗೆ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿತ್ತು. ಇದರ ಹೊರತಾಗಿ ಕೇವಲ ಮೂರು ದಿನಗಳ ಅಂತರದಲ್ಲಿ ದೆಹಲಿಯ ನಾಲ್ಕು ಶಾಲೆಗಳಿಗೆ ಇಂದು ಬೆಳಿಗ್ಗೆ ಇ ಮೈಲ್ ಮೂಲಕ ಮತ್ತೆ ಬಾಂಬ್ ಬೆದರಿಕೆ ಬಂದಿದೆ. ತಕ್ಷಣ ಶಾಲೆಗಳ ಆಡಳಿತ ಮಂಡಳಿ ನೀಡಿದ ಮಾಹಿತಿಯಂತೆ ಪೊಲೀಸರು ಮತ್ತು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.
ಇದೇ ರೀತಿ ಡಿಸೆಂಬರ್ ೯ರಂದು ದಿಲ್ಲಿಯ ಇತರ ನಾಲ್ಕು ಶಾಲೆಗಳಿಗೂ ಬಾಂಬ್ ಬೆದರಿಕೆ ಸಂದೇಶ ಲಭಿಸಿತ್ತು. ಅದು ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿ ೩ ಸಾವಿರ ಯುಎಸ್ ಡಾಲರ್ ನೀಡುವಂತೆ ಬೇಡಿಕೆಯೊಡ್ಡಿದ್ದನು. ಅಕ್ಟೋಬರ್ 20ರಂದು ದೆಹಲಿ ರೋಹಿಣಿ ಪ್ರದೇ ಶದ ಸಿಆರ್‌ಪಿಎಫ್ ಬಳಿ ಸ್ಫೋಟ ಸಂಭವಿಸಿತ್ತು. ಇದಾದ ನಂತರ ನವಂ ಬರ್ ಅಂತ್ಯದಲ್ಲಿ ದಿಲ್ಲಿ ಪ್ರಶಾಂತ್ ವಿಹಾರದಲ್ಲ್ಲೂ ಸ್ಫೋಟ ಸಂಭವಿಸಿತ್ತು.