ರೇಶನ್ ಕಾರ್ಡ್ ಮಸ್ಟರಿಂಗ್ ನಾಳೆಯಿಂದ ಪುನರಾರಂಭ: ಜಿಲ್ಲೆಯಲ್ಲಿ ಅ.3ರಿಂದ 8ರ ತನಕ

ಕಾಸರಗೋಡು: ರೇಶನ್ ಕಾರ್ಡ್‌ಗಳಲ್ಲಿ ಸದಸ್ಯರಾಗಿರುವವರ ಮಸ್ಟರಿಂಗ್ ರಾಜ್ಯದಲ್ಲಿ ನಾಳೆಯಿಂದ ಪುನರಾರಂಭಗೊಳ್ಳಲಿದೆ. ಇದರಂತೆ ಕಾಸರಗೋಡು ಜಿಲ್ಲೆಯಲ್ಲಿ ಅಕ್ಟೋಬರ್ 3ರಿಂದ 8ರ ತನಕ ಆಯಾ ರೇಶನ್ ಅಂಗಡಿಗಳಲ್ಲಿ ಮಸ್ಟರಿಂಗ್ ನಡೆಯಲಿದೆ. ಈ ತನಕ ಮಸ್ಟರಿಂಗ್ ನಡೆಸದ ರೇಶನ್ ಕಾರ್ಡ್‌ಗಳ ಸದಸ್ಯರು ಈ ದಿನಗಳಲ್ಲಿ ತಮ್ಮ ಮಸ್ಟರಿಂಗ್  ನಡೆಸಬೇಕಾಗಿದೆ. ಇಲ್ಲವಾದಲ್ಲಿ, ಅಂತಹ ಸದಸ್ಯರಿಗೆ ಲಭಿಸುವ ರೇಶನ್ ಸವಲತ್ತುಗಳು ಮೊಟಕುಗೊಳ್ಳಲಿದೆ.

ಕಾಸರಗೋಡು ಜಿಲ್ಲೆಯ ಹೊರತಾಗಿ ಕಣ್ಣೂರು, ಮಲಪ್ಪುರಂ, ವಯನಾಡು ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಅಕ್ಟೋಬರ್ ೩ರಿಂದ ೮ರ ತನಕ ಮಸ್ಟರಿಂಗ್ ನಡೆಯಲಿದೆ. ಉಳಿದ ಜಿಲ್ಲೆಗಳಲ್ಲಿ ನಾಳೆಯಿಂದ ಆರಂಭಗೊಂಡು ಸೆ.1ರ ತನಕ ನಿಗದಿತ ದಿನಾಂಕಗಳಂದು ಮಸ್ಟರಿಂಗ್ ನಡೆಸಲಾಗುವುದು.

ವಿಶೇಷವಾಗಿ ಆದ್ಯತಾ ವಿಭಾಗದ ಹಳದಿ ಮತ್ತು ಪಿಂಕ್ ಕಾರ್ಡ್‌ಗಳ ಸದಸ್ಯರ ಮಸ್ಟರಿಂಗ್ ಮೊದಲು ನಡೆಯಲಿದೆ.  ಇತರ ವಿಭಾಗದ ಬಿಳಿ ಮತ್ತು ನೀಲಿ ಬಣ್ಣದ ಕಾರ್ಡಗಳ ಸದಸ್ಯರ ಮಸ್ಟರಿಂಗ್ ದಿನಾಂಕವನ್ನು ನಂತರ ಘೋಷಿಸಲಾಗುವುದು.

ರೇಶನ ಕಾರ್ಡ್‌ಗಳ ಮೊದಲ ಹಂತದ ಮಸ್ಟರಿಂಗ್ ಕಳೆದ ಫೆಬ್ರವರಿಯಿಂದ ಮಾರ್ಚ್ 17ರ ತನಕ ನಡೆದಿತ್ತು. ಈ ಅವಧಿಯಲ್ಲಿ ಆದ್ಯತಾ ವಿಭಾಗಗಳಿಗೆ ಸೇರಿದ 45.87 ಲಕ್ಷ ಮಂದಿ ಮಸ್ಟರಿಂಗ್ ನಡೆಸಿದ್ದರು.

ಹಳದಿ ಮತ್ತು ಪಿಂಕ ರೇಶನ ಕಾರ್ಡಗಳ 1.07 ಕೋಟಿ ಮಂದಿ ಇನ್ನಷ್ಟೇ ಮಸ್ಟರಿಂಗ್ ನಡೆಸಲು ಬಾಕಿ ಉಳಿದುಕೊಂಡಿದೆ. ಇತರ ರಾಜ್ಯದವರು ಕೇರಳದಲ್ಲಿ ವಾಸಿಸುತ್ತಿದ್ದಲ್ಲಿ ಅವರು ಅಲ್ಲೇ ಪಕ್ಕದ ರೇಶನ್ ಅಂಗಡಿಗಳಲ್ಲಿ ಮಸ್ಟರಿಂಗ್ ನಡೆಸಬಹುದೆಂದು ರಾಜ್ಯ ನಾಗರಿಕಾ ಪೂರೈಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page