ರೇಶನ್ ಕಾರ್ಡ್ ಮಸ್ಟರಿಂಗ್ ಮೊಟಕು

ಕಾಸರಗೋಡು: ರೇಶನ್ ಕಾರ್ಡ್ ಗಳನ್ನು ಮಸ್ಟರಿಂಗ್ ಗೊಳಿಸುವ ಚಟು ವಟಿಕೆ  ಮೊದಲ ದಿನವಾದ ಇಂದು ಬೆಳಿಗ್ಗಿನಿಂದಲೇ ಮೊಟಕುಗೊಂಡಿದೆ. ಇದರಿಂದ ಇಂದು ಮುಂಜಾನೆಯಿಂ ದಲೇ ರೇಶನ್ ಅಂಗಡಿಗಳಿಗೆ ತಲುಪಿ ಸರದಿ ಸಾಲಲ್ಲಿ ಗಂಟೆಗಳ ಕಾಲ ಕಾದು ನಿಂತವರು ನಿರಾಸೆಗೊಂಡು ಮರಳಬೇಕಾದ  ಸ್ಥಿತಿ ಉಂಟಾಯಿತು.

ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ಗಳ ಮಸ್ಟರಿಂಗ್ ನಡೆಸಲು ಆ ಕಾರ್ಡ್‌ಗಳಲ್ಲಿ ಹೆಸರು ಒಳಗೊಂಡವರು ಇಂದು ರೇಶನ್ ಅಂಗಡಿಗಳಿಗೆ ತಲುಪುವಂತೆ ತಿಳಿಸಲಾ ಗಿತ್ತು. ಬೆಳಿಗ್ಗೆ  ೬ ಗಂಟೆಯಿಂದಲೇ ಮಸ್ಟರಿಂಗ್ ಕೇಂದ್ರಗಳಿಗೆ ತಲುಪಬೇ ಕೆಂದು ಸರಕಾರ ನಿರ್ದೇಶಿಸಿತ್ತು. ಅದರಂತೆ ಮುಂಜಾನೆಯಿಂದಲೇ ಕಾರ್ಡ್‌ಗಳಲ್ಲಿ ಹೆಸರು ಒಳಗೊಂಡವರು ರೇಶನ್ ಅಂಗಡಿಗಳಿಗೆ ತಲುಪಿದ್ದರು. ಆದರೆ ಆರಂಭದಲ್ಲೇ ಸರ್ವರ್ ಹಾನಿಗೀಡಾ ಗಿದ್ದು, ಇದರಿಂದ ಗಂಟೆಗಳ ಕಾಲ ನಿಂತು ಸಂಕಷ್ಟ ಎದುರಿಸಬೇಕಾಗಿ ಬಂತು.  ಶಾಲಾ ವಿದ್ಯಾರ್ಥಿಗಳು, ರಂಜಾನ್ ವ್ರತಾಚರಣೆಯಲ್ಲಿರು ವವರು ಹೆಚ್ಚಿನ ಸಂಖ್ಯೆಯಲ್ಲಿ ತಲುಪಿದ್ದರು. ಆದರೆ ಮಸ್ಟರಿಂಗ್ ಮೊಟಕುಗೊಂಡುದರಿಂದ  ಹಲವರು ನಿರಾಸೆಗೊಂಡು ಮರಳಿದರು. ಇಂದಿನಿಂದ ಮೂರು ದಿನಗಳ ಕಾಲ ಮಸ್ಟರಿಂಗ್ ನಡೆಸುವುದಾಗಿ ತಿಳಿಸಲಾ ಗಿದೆ. ಇದರಿಂದ ಮೊದಲ ದಿನವಾದ ಇಂದು ಬೆಳಿಗ್ಗೆ ತಲುಪಿದವರಿಗೆ ಸಂಕಷ್ಟ ಎದುರಾಗಿದೆ. ಇಂದು ಮಧ್ಯಾಹ್ನವರೆಗೆ ಸರದಿಯಲ್ಲಿ ನಿಂತವರಲ್ಲಿ ಹಳದಿ ಕಾರ್ಡ್‌ನವರು ಮಾತ್ರವೇ ನಿಂತರೆ ಸಾಕೆಂದೂ ಬಿಪಿಎಲ್ ಕಾರ್ಡ್‌ನವರು ನಾಳೆ ಬರುವಂತೆ ಕೆಲವೆಡೆ ಅಧಿಕಾರಿಗಳು ತಿಳಿಸಿದ್ದು, ಇದರಿಂದ ಪ್ರತಿಭಟನೆ ಯೂ ಕೇಳಿಬಂದಿದೆ.  ವಿದೇಶಗಳಲ್ಲಿ ರುವವರು, ಉದ್ಯೋಗ ಹಾಗೂ ಆದಾಯವುಳ್ಳವ ರನ್ನು ಬಿಪಿಎಲ್, ಅಂತ್ಯೋದಯ ಅನ್ನಯೋಜನೆ ಕಾರ್ಡ್ ನಿಂದ ಹೊರತುಪಡಿಸುವ  ಅಂಗವಾಗಿ  ರೇಶನ್ ಕಾರ್ಡ್ ಮಸ್ಟರಿಂಗ್ ನಡೆಸಲು ಉದ್ದೇಶಿಸಿ ರುವುದಾಗಿ ಹೇಳಲಾಗುತ್ತಿದೆ. ಇದರಂತೆ ಇಂದು ರೇಶನ್ ಅಂಗಡಿಗೆ ಹಲವರು ತಲುಪಿದ್ದು, ಆದರೆ ಅವರಿಗೆ ಮಸ್ಟರಿಂಗ್ ನಡೆದಿಲ್ಲ, ಅಲ್ಲದೆ ಆಹಾರ ಸಾಮಗ್ರಿಯೂ ಇಲ್ಲ ಎಂಬಂತಾಗಿದೆ.

Leave a Reply

Your email address will not be published. Required fields are marked *

You cannot copy content of this page