ರೇಶನ್ ಸಾಮಗ್ರಿಗಳನ್ನು ಎಫ್‌ಸಿಐಯಿಂದ ನೇರವಾಗಿ ಅಂಗಡಿಗಳಿಗೆ ತಲುಪಿಸಲು ಒತ್ತಾಯ

ಉಪ್ಪಳ: ಗುತ್ತಿಗೆದಾರರು ಯಥಾ ಸಮಯ ರೇಶನ್ ಸಾಮಗ್ರಿಗಳನ್ನು ವಿತರಿಸುವಲ್ಲಿ ಲೋಪವೆಸಗುತ್ತಿ ದ್ದಾರೆಂದೂ ಆದ್ದರಿಂದ ರೇಶನ್ ಸಾಮಗ್ರಿಗಳನ್ನು ಸಿವಿಲ್ ಸಪ್ಲೈ ಕಚೇರಿಯನ್ನು ಹೊರತುಪಡಿಸಿ ಎಫ್‌ಸಿಐಯಿಂದ ನೇರವಾಗಿ ರೇಶನ್ ಅಂಗಡಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕೆಂದು ಮಂಜೇಶ್ವರ ತಾಲೂಕು ರೇಶನ್ ಡೀಲರ್ಸ್ ಅಸೋಸಿಯೇಶನ್ ಸಮ್ಮೇಳನ ಒತ್ತಾಯಿಸಿದೆ. ವೇತನ ಪ್ಯಾಕೇಜ್ ಪರಿಷ್ಕರಿಸಬೇಕು, ಹಲವು ವರ್ಷಗಳಿಂದ ಅಂಗಡಿ ನಡೆಸುತ್ತಿ ರುವ ತಾತ್ಕಾಲಿಕ ರೇಶನ್ ಲೈಸನ್ಸ್ ಗಳನ್ನು ಖಾಯಂಗೊಳಿ ಸಬೇಕು, ವೇತನ ಯಥಾ ಸಮಯ ಲಭ್ಯಗೊಳಿ ಸಬೇಕು ಮುಂತಾದ ಬೇಡಿಕೆಗಳನ್ನು ಸಮ್ಮೇಳನ ಮುಂದಿರಿಸಿದೆ. ರಾಜ್ಯ ಕಾರ್ಯದರ್ಶಿ ಟಿ. ಮುಹಮ್ಮದ್ ಅಲಿ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಶರಣ್ ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರಹಿಮಾನ್, ರಾಜ್ಯ ಆರ್ಗನೈ ಸಿಂಗ್ ಸೆಕ್ರೆಟರಿ ಎ. ನಟರಾಜನ್, ಜಿಲ್ಲಾಧ್ಯಕ್ಷ ಶಂಕರ ಬೆಳ್ಳಿಗೆ, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಬಲ್ಲಾಳ್, ಸುರೇಶ್ ಮೇಲಾಂಕೋರ್, ಶಂಕರ ರಾವ್, ಇಬ್ರಾಹಿಂ, ಕಂಚಿಲ ಮುಹ ಮ್ಮದ್, ಪಿ.ಬಿ. ಅಬೂಬಕ್ಕರ್ ಮಾತನಾಡಿದರು.

You cannot copy contents of this page