ರೈತ ಕಾಂಗ್ರೆಸ್ ಜಿಲ್ಲಾ ಸಮಿತಿ ಸಭೆ

ಕುಂಬಳೆ: ರೈತ ಕಾಂಗ್ರೆಸ್ ಜಿಲ್ಲಾ ಸಮಿತಿ ಕುಂಬಳೆ ಅನಂತ ಪೈ ಸಭಾಭವನದಲ್ಲಿ ನಡೆಯಿತು. ರಾಜ್ಯ ಸಮಿತಿ ಕಾರ್ಯದರ್ಶಿ ಪ್ರೊ. ಅಶೋಕ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಧರಣಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾ ಯಿತು. ಜಿಲ್ಲಾ ಸಮಿತಿ ಅಧ್ಯಕ್ಷ ರಾಜು ಕರ್ಟಯಂ ಉದ್ಘಾಟಿಸಿದರು. ಕೆ.ಎ.ಸಿ.ಸಿ ಕಾರ್ಯದರ್ಶಿ ನ್ಯಾಯವಾದಿ ಸುಬ್ಬಯ್ಯ ರೈ ಮಾತನಾಡಿದರು. ಸಮಿತಿ ಅಧ್ಯಕ್ಷರಾಗಿ ಗಣೇಶ ಭಂಡಾರಿ ಪದಗ್ರಹಣ ನಡೆಸಿದರು. ಸುಂದರ ಆರಿಕ್ಕಾಡಿ, ಜೋಸ್, ಸೋಜಲ್ ಕುನ್ನಿಲ್, ಡಾ. ಟಿಟೊ ಜೋಸಫ್, ಗೋಪಾಲಕೃಷ್ಣನ್, ಲೋಕನಾಥ ಶೆಟ್ಟಿ, ಶಿವರಾಮ ಆಳ್ವ, ಲಕ್ಷ್ಮಣ ಪ್ರಭು, ಸಿ.ವಿ. ಬಾಲಕೃಷ್ಣನ್, ಅಬ್ರಾಹಂ, ರವಿಪೂಜಾರಿ, ಪ್ರಭಾಕರ ನಾಯ್ಕ, ವಸಂತ ರಾಜ್ ಶೆಟ್ಟಿ ಮಾತನಾಡಿದರು.

You cannot copy contents of this page