ರೈಲಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಸೆರೆ
ಕಾಸರಗೋಡು: ರೈಲಿನಲ್ಲಿ ಪ್ರಯಾ ಣಿಸುತ್ತಿದ್ದ ಎಂಬಿಎ ವಿದ್ಯಾರ್ಥಿನಿಯ ದೇಹ ಸ್ಪರ್ಶಿಸಿ ಕಿರುಕುಳ ನೀಡಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ರೈಲ್ವೇ ಎಸ್‌ಐ ಸಿ.ಎಚ್. ಸನಿಲ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ನೈವೇಲಿ ಶ್ರೀನಿವಾಸನ್ ನಿವಾಸಿ ವೆಂಕಟೇಶನ್ (35) ಎಂಬಾತ ಬಂಧಿತ ಆರೋಪಿ. ಕಿರುಕುಳಕ್ಕೊಳಗಾದ ವಿದ್ಯಾರ್ಥಿನಿ ರವಿವಾರದಂದು ರೈಲಿನಲ್ಲಿ ಸಂಚರಿಸುತ್ತಿದ್ದ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಆಕೆಯ ದೇಹ ಸ್ಪರ್ಶಿಸಿ ಕಿರುಕುಳ ನೀಡಲೆತ್ನಿಸಿದ್ದಾನೆ. ಆಗ ರೈಲಿನಲ್ಲಿದ್ದ ಇತರ ಪ್ರಯಾಣಿಕರು ಆರೋಪಿಯನ್ನು ತಡೆಹಿಡಿದು ಬಳಿಕ ರೈಲು ಕಾಸರಗೋಡು ನಿಲ್ದಾಣಕ್ಕೆ ತಲುಪಿದಾಗ ಆತನನ್ನು ರೈಲ್ವೇ ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ನೀಡಿದ ದೂರಿ ನಂತೆ ಕಾಸರಗೋಡು ರೈಲ್ವೇ ಪೊಲೀ ಸರು ಪ್ರಕರಣ ದಾಖಲಿಸಿಕೊಂಡು ಆತನ ಬಂಧನ ದಾಖಲಿಸಿಕೊಂಡಿದ್ದಾರೆ.