ರೈಲಿನಿಂದ ಬಿದ್ದು ನರ್ಸಿಂಗ್ ವಿದ್ಯಾರ್ಥಿನಿ ಮೃತ್ಯು
ಪತ್ತನಂತಿಟ್ಟ: ರಜೆಗೆ ಊರಿಗೆ ಹಿಂತಿ ರುಗಿದ ನರ್ಸಿಂಗ್ ವಿದ್ಯಾರ್ಥಿನಿ ರೈಲಿನಿಂದ ಬಿದ್ದು ಮೃತಪಟ್ಟಳು. ಪತ್ತನಂತಿಟ್ಟ ವಾಯ್ಪೂರ್ ನಿವಾಸಿ ಕೃಷ್ಣಪ್ರಿಯ (20) ಮೃತಪಟ್ಟವಳು. ಬೆಂಗಳೂರಿನಲ್ಲಿ ದ್ವಿತೀಯ ವರ್ಷ ನರ್ಸಿಂಗ್ ವಿದ್ಯಾರ್ಥಿನಿಯಾದ ಈಕೆ ನಿನ್ನೆ ಊರಿಗೆ ಹಿಂತಿರುಗಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಕೊಯಂಬತ್ತೂರು- ಪೋತನ್ನೂರು ಮಧ್ಯೆ ರೈಲಿನಿಂದ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತ ಯುವತಿ ತಂದೆ ಸಜಿ ಕುಮಾರ್, ತಾಯಿ ಮಂಜು, ಸಹೋದರ ಎಸ್. ಆಕಾಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.