ರೈಲಿನ ಅಡ್ಡವಾಗಿ ಜಿಗಿದ ನರಿ ಭಯಗೊಂಡ ಪ್ರಯಾಣಿಕರು
ಕಾಸರಗೋಡು: ಸಂಚರಿಸುತ್ತಿದ್ದ ರೈಲಿನ ಬೋಗಿಗೆ ನರಿಯೊಂದು ಜಿಗಿದು ಅದರಿಂದ ಭಾರೀ ದೊಡ್ಡ ಶಬ್ದ ಉಂ ಟಾಗಿ, ಅದು ಕಲ್ಲು ತೂರಾಟದಿಂದಾಗಿ ನಡೆದಿರಬಹು ದೆಂದು ಪ್ರಯಾಣಿಕರು ಭಾವಿಸಿ ಭಯಗೊಂಡ ಘಟನೆ ನಡೆದಿದೆ.
ಮಂಗಳೂರಿನಿಂದ ಕಣ್ಣೂರಿಗೆ ಹೋಗುವ ಪ್ಯಾಸೆಂಜರ್ ರೈಲು ನಿನ್ನೆ ಸಂಜೆ ಕಾಸರಗೋಡಿನಿಂದ ಹೊಸ ದುರ್ಗ ರೈಲು ನಿಲ್ದಾಣಕ್ಕೆ ತಲುಪಿ ಅಲ್ಲಿಂದ ನೀಲೇಶ್ವರ ರೈಲು ನಿಲ್ದಾಣದತ್ತ ಸಾಗುತ್ತಿದ್ದ ದಾರಿ ಮಧ್ಯೆ ಪಡನ್ನಕ್ಕಾಡಿಗೆ ತಲುಪುತ್ತಿದ್ದಂತೆಯೇ ಆ ರೈಲಿನ ನಾಲ್ಕನೇ ಬೋಗಿ ಮೇಲೆ ಅಲ್ಲೇ ಎತ್ತರದ ಸ್ಥಳದಿಂದ ನರಿಯೊಂದು ದಿಢೀರ್ ಆಗಿ ಜಿಗಿದಿದೆ. ಆಗ ದೊಡ್ಡ ಶಬ್ದವುಂಟಾ ಯಿತು. ಕಲ್ಲು ತೂರಾಟದಿಂದ ಅದು ನಡೆದಿರಬಹುದೆಂದು ಗ್ರಹಿಸಿ ಪ್ರಯಾಣಿಕರು ಆ ವೇಳೆ ಭಯಬೀತರಾ ದರು. ಅನಂತರ ನಡೆಸಿದ ತನಿಖೆಯಲ್ಲಷ್ಟೇ ರೈಲಿನ ಮೇಲೆ ಜಿಗಿದಿದ್ದು ನರಿಯಾಗಿತ್ತೆಂಬ ವಾಸ್ತವ ಸಂಗತಿ ತಿಳಿದು ಬಂತು.