ರೈಲುಗಳಲ್ಲಿ ಕಳವು: ಪೊಲೀಸ್ ಠಾಣೆಯಿಂದ ಪರಾರಿಯಾದ ಕಾಸರಗೋಡು ನಿವಾಸಿ ಆರೋಪಿ ಸೆರೆ
ಕಾಸರಗೋಡು: ಪೊಲೀಸರ ಕಸ್ಟಡಿಯಲ್ಲಿದ್ದಾಗ ಬಾತ್‌ರೂಂನ ಕಿಟಿಕಿಯ ಸರಳು ತೆಗೆದು ಆ ಮೂಲಕ ಪರಾರಿಯಾದ ಕಳವು ಪ್ರಕರಣದ ಆರೋಪಿಯಾದ ಕಾಸರಗೋಡು ನಿವಾಸಿ ಸೆರೆಗೀಡಾಗಿದ್ದಾನೆ.
ರೈಲುಗಳು ಹಾಗೂ ರೈಲು ನಿಲ್ದಾಣ ಕೇಂದ್ರೀಕರಿಸಿ ನಿರಂತರ ಕಳವು ನಡೆಸುವ ಕಾಸರಗೋಡು ಚೆರ್ಕಪ್ಪಾರ ಸಪ್ನ ಮಂಜಿಲ್‌ನ ಇಬ್ರಾಹಿಂ ಬಾದುಶಾ (26) ಸೆರೆಗೀಡಾದ ಆರೋಪಿ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಇತ್ತೀಚೆಗೆ ಆರೋಪಿಯ ನ್ನು ಎರ್ನಾಕುಳಂ ಸೌತ್ ರೈಲ್ವೇ ನಿಲ್ದಾಣದಿಂದ ಸೆರೆಹಿಡಿದು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಿತ್ತು. ಈವೇಳೆ ಠಾಣೆಯ ಬಾತ್‌ರೂಂಗೆ ಹೋದ ಆರೋಪಿ ಅಲ್ಲಿನ ಕಿಟಿಕಿಯ ಸರಳುಗಳನ್ನು ತೆಗೆದು ಪರಾರಿಯಾಗಿ ದ್ದನು. ಕೊಲ್ಲಂ, ಆಲಪ್ಪುಳ, ಕೋಟ್ಟಯಂ, ಎರ್ನಾಕುಳಂ, ತೃಶೂರು ಮೊದಲಾದೆಡೆಗಳ ರೈಲ್ವೇ ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಸ್ಕ್ವಾಡ್ ರೂಪೀಕರಿಸಿ ಆರೋಪಿ ಗಾಗಿ ಶೋಧ ನಡೆಸಲಾಗಿತ್ತು. ಮೊಬೈಲ್ ಫೋನ್ ಲೊಕೇಶನ್ ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಆರೋಪಿ ಪೆರುಂಬಾವೂರಿನ ಲ್ಲಿರುವುದಾಗಿ ಮಾಹಿತಿ ಲಭಿಸಿತು. ಕೂಡಲೇ ಕಾರ್ಯಾಚರಣೆ ನಡೆಸಿ ಅಲ್ಲಿನ ಬಸ್ ನಿಲ್ದಾಣದಿಂದ ಸೆರೆಹಿಡಿ ಯಲಾಗಿದೆ. ಬಂಧಿತ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
ಕೇರಳ, ತಮಿಳುನಾಡು, ಕರ್ನಾಟಕ ಮೊದಲಾದ ರಾಜ್ಯಗಳ ವಿವಿಧ ಠಾಣೆಗಳಲ್ಲಾಗಿ ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ವಾಹನ ಕಳವು ಪ್ರಕರಣ ಗಳೂ ಕೂಡಾ ಒಳಗೊಂಡಿವೆ. ಈತ ಈ ಹಿಂದೆಯೂ ಜೈಲಿನಿಂದ ಪರಾರಿ ಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.