ಕಾಸರಗೋಡು: ಶಾಲೆಗಳಲ್ಲಿ ಹಾಗೂ ರೈಲುಗಳಲ್ಲಿ ತೀವ್ರಗೊಂ ಡಿರುವ ರ‍್ಯಾಗಿಂಗ್ ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸ ಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆರ್.ಪಿ.ಎಫ್, ಕೇರಳ ರೈಲ್ವೇ ಪೊಲೀಸ್, ಜಿಲ್ಲಾ ಅಡಿಶನಲ್ ಎಸ್ಪಿ ದೇವದಾಸನ್ ಸಿ.ಎಂ, ಜಿಲ್ಲಾ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಅನಿಲ್ ಕುಮಾರ್ ಎ, ಆರ್‌ಪಿಎಫ್ ಇನ್‌ಸ್ಪೆಕ್ಟರ್, ಕೇರಳ ರೈಲ್ವೇ ಪೊಲೀಸ್ ಸ್ಟೇಶನ್ ಎಸ್‌ಎಚ್‌ಒ ಮೊದಲಾದವರು ಭಾಗವಹಿಸಿದರು. ರ‍್ಯಾಗಿಂಗ್ ತಡೆಗೆ ಸಂಯುಕ್ತವಾಗಿ ಸ್ಪೆಷಲ್ ಸ್ಕ್ವಾಡ್‌ಗೆ ಸಭೆಯಲ್ಲಿ ರೂಪು ನೀಡಲಾಯಿತು .ರೈಲು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ ರ‍್ಯಾಗಿಂಗ್ ನಡೆಸುವವರನ್ನು ಸ್ಪೆಷಲ್ ಸ್ಕ್ವಾಡ್ ಸೆರೆಹಿಡಿದು ಕ್ರಮ ಕೈಗೊಳ್ಳಲಿದೆ. ಇದರಂಗವಾಗಿ ಮಫ್ತಿಯಲ್ಲಿ ರೈಲುಗಳಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಈ ಶೈಕ್ಷಣಿಕ ವರ್ಷ ಆರಂಭಿಸಿದ ಬಳಿಕ ಹಲವು ರ‍್ಯಾಗಿಂಗ್ ಪ್ರಕರಣಗಳು ವರದಿ ಯಾಗಿದೆ. ಇತ್ತೀಚೆಗೆ ವಿದ್ಯಾರ್ಥಿ ಗಳ ತಂಡವೊಂದು ಓರ್ವ ಅಧ್ಯಾಪಕನಿಗೆ ರೈಲಿನಲ್ಲಿ ಹಲ್ಲೆ ನಡೆಸಿದ ಪ್ರಕರಣವೂ ನಡೆದಿತ್ತು. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ರೈಲಿನಲ್ಲಿ ರ‍್ಯಾಗಿಂಗ್ ನಡೆಸುತ್ತಿರುವುದು ಪ್ರಯಾಣಿಕರಿಗೆ ತೀವ್ರ ಸಮಸ್ಯೆ ಸೃಷ್ಟಿಸಿದೆ. ಈ ಬಗ್ಗೆ ಮಕ್ಕಳ ರಕ್ಷಕರು ಹಾಗೂ ಪ್ರಯಾಣಿಕರಿಂದ ದೂರುಗಳು ಲಭಿಸಿದ ಹಿನ್ನೆ ಯಲ್ಲಿ ರ‍್ಯಾಗಿಂಗ್ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ರ‍್ಯಾಗಿಂಗ್ ನಡೆಸಿರುವುದು ಸಾಬೀತುಗೊಂಡಲ್ಲಿ ಎರಡು ವರ್ಷ ವರೆಗೆ ಸಜೆ ಹಾಗೂ ೧೦,೦೦೦ ವರೆಗೆ ದಂಡ ವಿಧಿಸಲಾಗುವುದು. ಇದೇ ವೇಳೆ ಯಾವುದಾದರೂ ಸಂಸ್ಥೆ ರ‍್ಯಾಗಿಂಗ್ ನಡೆದಿರುವುದನ್ನು ಮುಚ್ಚಿಡಲು ಪ್ರಯತ್ನಿಸಿದರೆ ಆ ಸಂಸ್ಥೆ ರ‍್ಯಾಗಿಂ ಗ್‌ಗೆ ಸಹಕಾರ ಒದಗಿಸಿರುವುದಾಗಿ ಭಾವಿಸಿಕ್ರಮ ಕೈಗೊಳ್ಳಲಾಗುವುದು. ರ‍್ಯಾಗಿಂಗ್‌ಗೆ ಸಂಬಂಧಿಸಿ ದೂರುಗಳನ್ನು ಆಂಟಿ ರ‍್ಯಾಗಿಂಗ್ ಹೆಲ್ಪ್ ಲೈನ್ ನಂಬ್ರವಾದ 1800-180-5522 (ಟೋಲ್ ಫ್ರೀ)ಕ್ಕೆ ಕರೆಮಾಡಿ ತಿಳಿ ಬಹುದಾಗಿದೆ. ಅದೇ ರೀತಿ ಪೊಲೀಸ್ ಠಾಣೆಗಳಲ್ಲೂ ಈ ಬಗ್ಗೆ ದೂರು ನೀಡಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
