ರೈಲು ನಿಲ್ದಾಣದಿಂದ 2.680 ಕೆ.ಜಿ. ಗಾಂಜಾ ಪತ್ತೆ
ಕಾಸರಗೋಡು: ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಕಾಸರಗೋಡು ಅಬಕಾರಿ ಸರ್ಕಲ್ ಇನ್‌ಸ್ಪೆಕ್ಟರ್ ಅಮಲ್‌ರಾಜ್ ನೇತೃತ್ವದ ಅಬಕಾರಿ ತಂಡ ಹಾಗೂ ಕಾಸರಗೋ ಡು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಜಂಟಿಯಾಗಿ ಕಾಸರಗೋಡು ರೈಲು ನಿಲ್ದಾಣದಲ್ಲಿ ನಿನ್ನೆ ನಡೆಸಿದ ತಪಾಸಣೆಯಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ೨,೬೮೦ ಕೆ.ಜಿ ಗಾಂಜಾ ಪತ್ತೆಹಚ್ಚಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಮಾಲನ್ನು ಅಲ್ಲಿ ತಂದಿರಿಸಿದವರನ್ನು ಪತ್ತೆಹಚ್ಚುವ ಕೆಲಸದಲ್ಲೂ ಅಬಕಾರಿ ಇಲಾಖೆ ತೊಡಗಿದೆ.ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಮೊಹಮ್ಮದ್ ಕಬೀರ್ ಬಿ.ಎಸ್, ಗ್ರೇಡ್ ಪ್ರಿವೆಂಟೀವ್ ಆಫೀಸರ್ ಪ್ರಸಾದ್ ಎಂ ಎಂ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ದೀಪು ಬಿ ಎನ್, ಅರುಣ್ ಆರ್.ಕೆ, ಆರ್‌ಪಿಎಫ್ ಎ.ಎಸ್.ಐ ಅಜಿತ್ ಕುಮಾರ್ ಎಂ.ಟಿ, ಆರ್‌ಪಿಸಿ ಎಸ್‌ಐ ಸನಿಲ್ ಕುಮಾರ್, ಆರ್‌ಪಿಎಫ್‌ನ ಹೆಡ್‌ಕಾನ್‌ಸ್ಟೇಬಲ್ ಪಿ. ರಾಜೀವನ್, ಕಾನ್‌ಸ್ಟೇಬಲ್ ಎಂ.ಟಿ. ರಾಜೇಶ್ ಎಂಬಿವರು ಒಳಗೊಂಡಿದ್ದರು