ರೋಗಬಾಧಿತ ಪರಿಶಿಷ್ಟ ಜಾತಿ ಕುಟುಂಬದ ಮನೆ ಕುಸಿತ: 15 ದಿನಗಳ ಹಿಂದೆ ನಾಗರಿಕರು ಕುಟುಂಬವನ್ನು ಸ್ಥಳಾಂತರಿಸಿದುದರಿಂದ ತಪ್ಪಿದ ಭಾರೀ ದುರಂತ

ಕುಂಬಳೆ: ಕುಸಿದು ಬೀಳಲಾದ ಮನೆಯ  ದುರಸ್ತಿಗೆ ಬೇಕಾದ ಕ್ರಮ ಕೈಗೊಳ್ಳದ ಅಧಿಕಾರಿಗಳು ಮನೆ ಕುಸಿದು ಬಿದ್ದಾಗ ಸ್ಥಳಕ್ಕೆ ಭೇಟಿ ನೀಡಿದ್ದಾರೆ.  ಮನೆಯ ಸ್ಥಿತಿಯ ಬಗ್ಗೆ ವರದಿ ತಯಾರಿಸಿ ಕೂಡಲೇ ಮೇಲ ಧಿಕಾರಿಗಳಿಗೆ ಕಳುಹಿಸಿಕೊಡುವು ದಾಗಿ ತಿಳಿಸಿ ಅವರು ಮರಳಿದರು.

ಹಲವು ವರ್ಷಗಳ ಹಿಂದೆ ಸರಕಾರದ ಯೋಜನೆಯಲ್ಲಿ ಮಂಜೂರಾಗಿ ನಿರ್ಮಿಸಲಾದ ಮನೆ ನಿನ್ನೆ ಮುಂಜಾನೆ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದಿದೆ.  ಪುತ್ತಿಗೆ ಪಂಚಾಯತ್ 11ನೇ ವಾರ್ಡ್‌ನ ಎಸ್‌ಸಿ ಕಾಲನಿಯಲ್ಲಿ ಅಸೌಖ್ಯ ಬಾಧಿಸಿ ಹಾಸಿಗೆ ಹಿಡಿದಿರುವ ಕಮಲ (60), ಅವರ ಪುತ್ರ ರಮೇಶ್ (42) ಎಂಬಿವರು ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮನೆ ಕುಸಿಯಲು ಸಾಧ್ಯತೆ ಇರುವುದನ್ನು ಗಮನಿಸಿದ ನಾಗರಿಕರು ಆವಾಗಲೇ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಮನೆಯ ಸ್ಥಿತಿಗತಿ ತಿಳಿಯಲು ಅಧಿಕಾರಿಗಳ್ಯಾರೂ ತಲುಪಿರಲಿಲ್ಲ. ಇದರಿಂದ ೧೫ ದಿನಗಳ ಹಿಂದೆ ನಾಗರಿಕರು ತಾಯಿ ಹಾಗೂ ಮಗನ ನ್ನು ಬಾಡಿಗೆ ಕೊಠಡಿಗೆ ಸ್ಥಳಾಂತರಿಸಿ ದರು.  ಇವರು ತೆರವುಗೊಳಿಸಿದ ಮನೆ ನಿನ್ನೆ ಮುಂಜಾನೆ 2.30ರ ವೇಳೆ ಕುಸಿದುಬಿದ್ದಿದೆ. ಇವರನ್ನು ಮನೆಯಿಂದ ಸ್ಥಳಾಂತರಿಸದಿರುತ್ತಿದ್ದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತೆಂದು ನಾಗರಿಕರು ತಿಳಿಸುತ್ತಿದ್ದಾರೆ. ಮನೆ ಅಪಾಯ ಸ್ಥಿತಿಯಲ್ಲಿದೆಯೆಂದು ತಿಳಿದರೂ  ಭೇಟಿ ನೀಡಿ ಪರಿಶೀಲಿಸಲು ತಯಾರಾಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯ  ಕ್ರಮವೆಂದು ನಾಗರಿಕರು ಹೇಳುತ್ತಿದ್ದಾರೆ.

You cannot copy contents of this page