ರೋಗಿ ಆಸ್ಪತ್ರೆಯಲ್ಲಿ ಕಿಟಿಕಿಯಿಂದ ಹಾರಿ ಆತ್ಮಹತ್ಯೆ
ಕಲ್ಲಿಕೋಟೆ: ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಆತ್ಮಹತ್ಯೆ ಗೈದಿದ್ದಾನೆ. ತಲಶ್ಶೇರಿ ವೈದ್ಯರವಿಡ ನಿವಾಸಿಯಾದ ಅಸ್ಕರ್ ಆತ್ಮಹತ್ಯೆ ಗೈದ ಯುವಕ. ಪಾನ್‌ಕ್ರಿಯಾಸ್ ಸಂಬಂಧವಾದ ಅಸೌಖ್ಯದ ಹಿನ್ನೆಲೆ ಯಲ್ಲಿ ಆದಿತ್ಯವಾರ ಈತನನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ 1.15ರ ವೇಳೆ ವಾರ್ಡ್‌ನ ಕಿಟಿಕಿ ಮೂಲಕ ಹೊರಗೆ ಹಾರಿ ಆತ್ಮಹತ್ಯೆಗೈದಿದ್ದಾನೆಂದು ಜೊತೆಗಿದ್ದವರು ತಿಳಿಸಿದ್ದಾರೆ. ಅಲ್ಲದೆ ನೋವು ಸಹಿಸಲಸಾಧ್ಯವಾಗಿ ಆತ್ಮ ಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ.