ಲಂಚಗುಳಿತನ, ಭ್ರಷ್ಟಾಚಾರ: ಜಿಲ್ಲೆಯ 19 ಸೇರಿ ರಾಜ್ಯದಲ್ಲಿ 539 ಸರಕಾರಿ ಸಿಬ್ಬಂದಿಗಳ ವಿರುದ್ಧ ವಿಜಿಲೆನ್ಸ್ ಕೇಸು
ತಿರುವನಂತಪುರ: ತಿರುವನಂ ತಪುರ ಬಾಲರಾಮಪುರದಲ್ಲಿ ಎರಡು ವರ್ಷದ ಮಗುವನ್ನು ತಾಯಿಯ ಸಹೋದರನೇ ಬಾವಿಗೆಸೆದು ಕೊಲೆಗೈದುದಾಗಿ ಖಚಿತಗೊಂಡಿದೆ. ಈ ಸಂಬAಧ ಆರೋಪಿಯಾದ ಹರಿ ಕುಮಾರ್ (24) ಎಂಬಾತನನ್ನು ಬಂಧಿಸಲಾಗಿದೆ. ಬಾಲ ರಾಮಪುರ ಕೋಟ್ಟುಕಾಲ್ಕೋಣಂ ವಾರುವಿಳಕತ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುವ ಶ್ರೀತು-ಶ್ರೀಜಿತ ದಂಪತಿಯ ಪುತ್ರಿ ದೇವೇಂದು (2) ಎಂಬ ಮಗು ನಿನ್ನೆ ಮುಂಜಾನೆ ಮನೆಯ ಬಾವಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬAಧ ಪೊಲೀಸರು ತನಖೆ ಆರಂಭಿಸಿದಾಗ ಮಗುವನ್ನು ತಾಯಿಯ ಸಹೋದರ ಹರಿ ಕುಮಾರ್ ಎಂಬಾತನೇ ಬಾವಿಗೆಸೆದು ಕೊಲೆಗೈದುದಾಗಿ ತಿಳಿದುಬಂದಿದೆ. ಸಹೋದರಿಯೊಂ ದಿಗಿನ ದ್ವೇಷವೇ ಮಗುವನ್ನು ಬಾವಿಗೆಸೆದು ಕೊಲೆಗೈಯ್ಯಲು ಕಾರಣ ವೆಂದು ಆರೋಪಿ ಪೊಲೀಸರಲ್ಲಿ ತಿಳಿಸಿದ್ದಾನೆ. ಮಗುವನ್ನು ಜೀವಂತವಾಗಿ ಬಾವಿಗೆಸೆದು ಕೊಲೆಗೈದುದಾಗಿ ತಿಳಿಸಿದ್ದಾನೆ. ಇದೇ ವೇಳೆ ಈ ಪ್ರಕರಣಕ್ಕೆ ಸಂಬAಧಿಸಿ ನಿಗೂಢತೆ ಮುಂದುವರಿದ ಹಿನ್ನೆಲೆಯಲ್ಲಿ ಮಗುವಿನ ತಾಯಿ ಸಹಿತ ಸಂಬAಧಿಕರನ್ನು ಪೊಲೀಸರು ತನಿಖೆ ಗೊಳಪಡಿಸುತ್ತಿದ್ದಾರೆ. ಮಗುವಿನ ಕೊಲೆ ಯಲ್ಲಿ ಬೇರೆ ಯಾರಾದರೂ ಶಾಮೀ ಲಾಗಿದ್ದಾರೆಯೇ ಎಂದು ತಿಳಿಯಲು ತನಿಖೆ ತೀವ್ರಗೊಳಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.