ಲಂಡನ್ ದೊರೆಗೆ ಕಾಸರಗೋಡಿನ ಯುವತಿ ಅಸಿಸ್ಟೆಂಟ್ ಸೆಕ್ರೆಟರಿ

ಕಾಸರಗೋಡು: ಲಂಡನ್‌ನ ಚಾರ್ಲ್ಸ್ ದೊರೆಯ ಅಸಿಸ್ಟೆಂಟ್ ಸೆಕ್ರೆಟರಿಯಾಗಿ ಕಾಸರಗೋಡಿನ ಯುವತಿ ನೇಮಕಗೊಂಡಿದ್ದಾರೆ. ತಳಂಗರೆ ತೆರುವತ್ ಹಾಶಿಂ ಸ್ಟ್ರೀಟ್‌ನ ದಿ| ಪುದಿಯಪುರ ಶಂಸುದ್ದೀನ್ -ಸೈರುನ್ನೀಸ ದಂಪತಿಯ ಪುತ್ರಿ ಮುನ ಶಂಸುದ್ದೀನ್‌ರನ್ನು ಈ ಹುದ್ದೆಗೆ ನೇಮಿಸಲಾಗಿದೆ. ಬ್ರಿಟೀಷ್ ಕಾನೂನು ಸಲಹಾ ಕಚೇರಿಯಲ್ಲಿ ದಲ್ಲಿ ಉದ್ಯೋಗ ಆರಂಭಿಸಿ ಕಾಮನ್‌ವೆಲ್ತ್ ಡೆವಲಪ್ ಮೆಂಟ್ ವಿಭಾಗದಲ್ಲಿ ಉದ್ಯೋಗ ದಲ್ಲಿದ್ದಾಗ ಅಲ್ಲಿನ ದೊರೆಯ ಅಸಿಸ್ಟೆಂಟ್ ಸೆಕ್ರೆಟರಿ ಯಾಗುವ ಅವಕಾಶ ಒದಗಿ ಬಂದಿದೆ. ಇದು ಕಾಸರಗೋಡಿಗೆ ಹೆಮ್ಮೆ ತಂದಿರುವ ಸಂಗತಿಯಾಗಿದ್ದು, ಈ ಸಾಧನೆಗೆ ಊರಿನವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page