ಲಯನ್ಸ್ ಕ್ಲಬ್ ಮಂಜೇಶ್ವರ- ಉಪ್ಪಳ ಸುವರ್ಣ ಮಹೋತ್ಸವ, ಸನ್ಮಾನ ಸಮಾರಂಭ
ಉಪ್ಪಳ: ಲಯನ್ಸ್ ಕ್ಲಬ್ ಮಂ ಜೇಶ್ವರ-ಉಪ್ಪಳ ಇದರ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಐಲ ಶ್ರೀ ದುರ್ಗಾಪರಮೇಶ್ವರೀ ಕಲಾ ಭವನ ದಲ್ಲಿ ನೆರವೇರಿತು. ಕ್ಲಬ್ ಅಧ್ಯಕ್ಷ ಲಯನ್ ಲಕ್ಷ÷್ಮಣ್ ಕುಂಬಳೆ ರವರ ಅಧ್ಯಕ್ಷತೆಯಲ್ಲಿ ಲಯನ್ ಸಿ.ಎ ಟಿ.ಕೆ ರಜೀಶ್ ದೀಪ ಬೆಳಗಿಸಿ ಉದ್ಘಾಟಿಸಿ ದರು. ಲಯನ್ಸ್ ಕ್ಲಬ್‌ನ ಸ್ಥಾಪಕ ಸದಸ್ಯ ಲ| ಡಾ.ಶ್ರೀಧರ ಭಟ್ ಲಯನ್ಸ್ ಕ್ಲಬ್ 50 ವರ್ಷ ನಡೆದು ಬಂದ ದಾರಿ ಹಾಗೂ ಸೇವಾ ಚಟುವಟುಕೆಗಳ ಬಗ್ಗೆ ಮಾಹಿತಿ ನೀಡಿದರು. ಕ್ಲಬ್‌ನ ಸ್ಥಾಪಕ ಅಧ್ಯಕ್ಷÀ ಕೆ.ಪಿ ಹೊಳ್ಳ, ಲ| ಪಿ.ಕಿಶೋರ್ ರಾವ್ (ಎಂ.ಜೆ.ಎಫ್), ಐಲ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಹೊಳ್ಳ, ಲ| ವಿ.ವೇಣುಗೋಪಾಲನ್, ಲ| ನಾಸೀರ್ ಕೋಲವಯಿ, ಲ| ಗಣೇಶ್ ಎಂ. ಶುಭಾಂಶನೆಗೈದರು. ಕ್ಲಬ್‌ನ ಪದಾಧಿ ಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಕೆಪಿ ಹೊಳ್ಳ, ಡಾ.ಶ್ರೀಧರ ಭಟ್, ಡಾ.ಗಣೇಶ್ ಮಯ್ಯ, ಡಾ..ನಿಶ್ಮಿತ ಪಕಳ, ಡಾ.ವೈಷ್ಣವಿ ಟಿ.ಶೆಟ್ಟಿ, ಶ್ಯಾಮಲ ಆರ್.ಭಟ್ ಬೇಕೂರು, ಸುಮತಿ ಕೂಡ್ಲು, ಹರೀಶ್ ಶೆಟ್ಟಿ ಮಾಡ, ಅಬ್ದುಲ್ ರಹಿಮಾನ್, ರವಿ ಪ್ರತಾಪನಗರ, ನವೀನಾಕ್ಷ ಶಿರಿಯ, ಉಪೇಂದ್ರ.ಜಿ ಐಲ್, ಸಂಜನ. ಯು.ಐಲ್ ಮೊದಲಾದವರನ್ನು ಸನ್ಮಾನಿಸಲಾಯಿತು. ಅತಿಥಿಗಳಿಗೆ ಹಾಗೂ ಕ್ಲಬ್‌ನ ಸದಸ್ಯರಿಗೆ 50ನೇ ವರ್ಷದ ಸ್ಮರಣಿಕೆ ನೀಡಲಾಯಿತು.
ಲ| ಕೃಷ್ಣ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಎಂ. ವರದಿ ಮಂಡಿಸಿದರು. ಕಾರ್ಯದರ್ಶಿ ಕಮಲಾಕ್ಷ ಪಂಜ ವಂದಿಸಿದರು. ಲಿಖಿತ.ಎಲ್.ಕುಂಬ್ಳೆ ಪ್ರಾರ್ಥನೆ ಹಾಡಿದರು. ಅರ್ಪಿತ.ಕೆ ಪಂಜ ಧ್ವಜ ವಂದನೆಗೈದರು. ಲ| ಪ್ರವೀಣ್ ಪಕಳ ಮತ್ತು ಲ| ವಿಜಯನ್.ಕೆ ಕಾಸರಗೋಡು ನಿರೂಪಿಸಿದರು. ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಕುದ್ರೋಳಿ ಗಣೇಶ್ ರವರಿಂದ ಜಾದೂ ಪ್ರದರ್ಶನ ನಡೆದಿದ್ದು ಅವರನ್ನು ಗೌರವಿಸಲಾಯಿತು.