ಲಾರಿಗಳಿಗೆ ನಕಲಿ ನಂಬ್ರ ಪ್ಲೇಟ್: ಕೊಯಿಪ್ಪಾಡಿ ನಿವಾಸಿ ಸಹಿತ ಇಬ್ಬರ ಸೆರೆ

ಕಣ್ಣೂರು: ತೆರಿಗೆ ವಂಚಿಸಲು ವಾಹನಗಳಿಗೆ ನಕಲಿ ನಂಬ್ರ ಪ್ಲೇಟ್ ತಯಾರಿಸಿದ ಆರೋಪದಂತೆ  ಲಾರಿಯ ಮಾಲಕ ಹಾಗೂ ಸಹಾಯಕನನ್ನು ವಳಪಟ್ಟಣಂ ಪೊಲೀಸರು ಬಂಧಿಸಿದ್ದಾರೆ.

ಕುಂಬಳೆ ಕೊಯಿಪ್ಪಾಡಿ ಶಾಜಹಾನ್ ಮಂಜಿಲ್‌ನ ಅಬ್ದುಲ್ ಖಾದರ್ ಸಫ್ವಾನ್ (31), ಈತನ ಸಹಾಯಕ ಮಟ್ಟನ್ನೂರು ಪೋ ರೋಂನ ಟಿ.ಕೆ. ನೌಫಲ್ (31) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.

ಜುಲೈ 3ರಂದು ವಳಪಟ್ಟಣಂನಲ್ಲಿ ಮೋಟಾರ್ ವಾಹನ ಇಲಾಖೆ ಅಧಿಕಾರಿಗಳು ನಡೆಸಿದ ವಾಹನ ತಪಾಸಣೆ ವೇಳೆ ವಂಚನೆ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಕರ್ನಾಟಕ ನೋಂದಾವಣೆಯುಳ್ಳ ವಾಹನಗಳಿಗೆ ನಕಲಿ ನಂಬ್ರಪ್ಲೇಟ್‌ಗಳನ್ನು ಅಳವಡಿಸಿ ವಂಚನೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಪಾಸಣೆ ವೇಳೆ ಲಾರಿಯಿಂದ ಓಡಿ  ಪರಾರಿಯಾದ  ಚಾಲಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

You cannot copy contents of this page