ಲಾರಿ ಢಿಕ್ಕಿ ಹೊಡೆಸಿಪೊಲೀಸರನ್ನು ಕೊಲೆಗೈಯ್ಯಲುಯತ್ನಿಸಿದ ಪ್ರಕರಣ: ಓರ್ವ ಸೆರೆ
ಕಾಸರಗೋಡು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ತಂಡವನ್ನು ಸೆರೆಹಿಡಿಯಲು ಹೋದ ಎಸ್‌ಐ ಮತ್ತು ಪೊಲೀಸರು ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆಸಿ ಪೊಲೀಸ್ ತಂಡವನ್ನು ಕೊಲೆಗೈಯ್ಯ ಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಅನಂತಪಳ್ಳದ ಫಾಸಿಲ್ (26) ಬಂಧಿತ ಆರೋಪಿ. ಈತ ತಲೆಮರೆಸಿ ಕೊಂಡು ಜೀವಿಸುತ್ತಿದ್ದನು. ಈ ಪ್ರಕರಣದಲ್ಲಿ ಇರ್ಫಾನ್ ಎಂಬ ಇನ್ನೋರ್ವ ಆರೋಪಿ ಒಳಗೊಂಡಿದ್ದು, ಆತ ಈಗಲೂ ತಲೆಮರೆಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮರಳುಗಾರಿಕೆಯ ವರನ್ನು ಸೆರೆಹಿಡಿಯಲು ಹೊಸದುರ್ಗ ಪೊಲೀಸ್ ಠಾಣೆಯ ಎಸ್‌ಐ ಮತ್ತು ಇತರ ಪೊಲೀಸರು ಜ. ೩೦ರಂದು ಮುಂಜಾನೆ ಕಾರಿನಲ್ಲಿ ಮಾರು ವೇಷದಲ್ಲಿ ಹೋಗುತ್ತಿದ್ದ ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಆ ಕಾರಿಗೆ ಢಿಕ್ಕಿ ಹೊಡೆಸಿ ಬಳಿಕ ಹೊಯ್ಗೆಯನ್ನು ರಸ್ತೆಯಲ್ಲೇ ಇಳಿಸಿದ ಬಳಿಕ ಅದರಲ್ಲಿದ್ದ ಅಕ್ರಮಿಗಳು ಪರಾರಿಯಾಗಿದ್ದರು. ಟಿಪ್ಪರ್ ಲಾರಿಯನ್ನು ಪೊಲೀಸರು ಬಳಿಕ ಪತ್ತೆಹಚ್ಚಿದ್ದರು.