ಲಾರಿ ರಸ್ತೆ ಡಿವೈಡರ್‌ಗೆ ಢಿಕ್ಕಿ  : ಚಾಲಕ ಅಪಾಯದಿಂದ ಪಾರು

ಕುಂಬಳೆ: ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆಯ ಡಿವೈಡರ್‌ಗೆ ಢಿಕ್ಕಿ ಹೊಡೆದುನಿಂತ ಘಟನೆ ನಡೆದಿದೆ. ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ೮ ಗಂಟೆಗೆ ಈ ಅಪಘಾತ ವುಂಟಾಗಿದೆ. ಚಾಲಕ ಕಲ್ಲಿಕೋಟೆಯ ಸಿರಿಲ್ ಎಂಬವರು ಅಪಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.

ಗೋವಾದಿಂದ ಕಲ್ಲಿಕೋಟೆಗೆ ಪಾರ್ಸಲ್ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಪದೇ ಪದೇ ಸಂಭವಿಸುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಒಂದು ವಾರ ಹಿಂದೆಯಷ್ಟೇ ಶಿರಿಯ ದಲ್ಲಿ ಸಂಭವಿಸಿದ ವಾಹನ ಅಪಘಾತ ದಲ್ಲಿ ಯುವಕನೋರ್ವ ಮೃತಪಟ್ಟಿದ್ದರು. ಮೊನ್ನೆ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ಪೇಟೆಗೆ ಪ್ರವೇಸಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಬಂದ ಟೋರಸ್ ಲಾರಿ ಢಿಕ್ಕಿಹೊಡೆ ದಿತ್ತು. ಈ ಅಪಘಾತದಲ್ಲಿ ಬೈಕ್‌ನಲ್ಲಿದ್ದ ತಂದೆ ಹಾಗೂ ಪುತ್ರ ಗಾಯಗೊಂಡಿದ್ದಾರೆ.  ಅದೇ ದಿನ ಸಂಜೆ ಮೊಗ್ರಾಲ್  ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ವ್ಯಾನ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸಂಭವಿಸಿತ್ತು.

You cannot copy contents of this page